Breaking News

ಶಾಂತಿ ಕದಡಿ ಪೊಲೀಸ್ ಮೇಲೆ ದಾಳಿ ಮಾಡುವರ ಮೇಲೆ ಗುಂಡಿಕ್ಕಲು ಆದೇಶ ನೀಡಿದ ಐಜಿಪಿ ಹರಿಶೇಖರನ್



ಮಂಗಳೂರು : ಆರ್‍ಎಸ್‍ಎಸ್‍ ಕಾರ್ಯಕರ್ತ ಶರತ್ ಹತ್ಯೆ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ಪರಿಸ್ಥಿತಿ ಉದ್ಚಿಗ್ನಗೊಂಡಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದ್ದು, ಕಿಡಿಗೇಡಿಗಳನ್ನು ಬಂಧಿಸಲು ಪೊಲೀಸ್‍ ಇಲಾಖೆ ತೀಕ್ಷ್ಣ ಕಾರ್ಯಾಚರಣೆಗಿಳಿದಿದ್ದು, ಪೊಲೀಸರ ವಿರುದ್ಧ ದಾಳಿಗೆ ಯತ್ನಿಸಿದರೆ ಕಾನೂನು ವ್ಯಾಪ್ತಿಯಲ್ಲಿ ಗುಂಡು ಹಾರಿಸಲು ಆದೇಶ ನೀಡಲಾಗಿದೆ.

ಬಂಟ್ವಾಳ ಹಾಗೂ ಬಿ.ಸಿ.ರೋಡ್‍ನಲ್ಲಿ ಶನಿವಾರ ಕಲ್ಲುತೂರಾಟ ನಡೆಸಿದ್ದು, ಚೂರಿ ಇರಿತ ಪ್ರಕರಣಗಳೂ ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಭಾನುವಾರ ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಪೊಲೀಸರು ಕೈಗೊಂಡ ಕ್ರಮಗಳನ್ನು ಮಾಧ್ಯಮಗಳಿಗೆ ವಿವರಿಸಿದರು.

ಕಲ್ಲಡ್ಕ, ವಿಟ್ಲ, ಬಂಟ್ಬಾಳ ಸೇರಿದಂತೆ 26 ಸೂಕ್ಷ್ಮಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದೆ. ಚಾಕು, ಚೂರಿ ಸೇರಿದಂತೆ ಯಾವುದೇ ರೀತಿಯ ಮಾರಕಾಸ್ತ್ರ ಹೊಂದಿದ್ದರೆ ಅವರನ್ನು ಕೂಡಲೇ ಬಂಧಿಸಿ ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗುವುದು ಎಂದು ಅವರು ಹೇಳಿದರು.

ಶರತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಬಂಧನಕ್ಕೆ ಸಿಸಿಬಿ ನೆರವು ಪಡೆಯಲು ಉದ್ದೇಶಿಸಲಾಗಿದೆ. ಅಲ್ಲದೇ ಸಾಕ್ಷ್ಯ ಸಂಗ್ರಹಕ್ಕೆ ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

No comments