ಶರತ್ ಮಡಿವಾಳ ಮನೆಗೆ ಸುನಿಲ್ ಕುಮಾರ್ ಭೇಟಿ
ಮಂಗಳೂರು : ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಶರತ್ ಮಡಿವಾಳ ಅವರ ಮನೆಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಭೇಟಿ ಮಾಡಿ ಹೆತ್ತವರಿಗೆ ಸಾಂತ್ವನ ಹೇಳಿ ಒಂದು ಲಕ್ಷ ಪರಿಹಾರ ಮೊತ್ತ ಶರತ್ ಕುಟುಂಬಕ್ಕೆ ಹಸ್ತಾ೦ತಾರಿಸಿದರು. ಸ್ಥಳೀಯ ಬಿಜೆಪಿ ಮುಖಂಡ ರಾಜೇಶ್ ನಾಯ್ಕ ಮತ್ತು ಇನ್ನಿತರರು ಹಾಜರಿದ್ದರು .
ಹೆತ್ತವರಿಗೆ ಸಾಂತ್ವನ ನೀಡಿದ ಬಳಿಕ ಸುದ್ದಿ 24x7 ಜೊತೆ ಮಾತನಾಡಿದ ಸುನಿಲ್ ಕುಮಾರ್ , ಶರತ್ ಮಡಿವಾಳ ಕೊಲೆ ಪ್ರಕರಣವಾಗಿ ವಾರವಾಗುತ್ತಿದ್ದರೂ ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ಮೃತರ ಮನೆಗೆ ಭೇಟಿ ನೀಡದಿರುವುದು, ಅವರೊಳಗೆ ಮಾನವೀಯತೆ ಅಂಶವಿದೆಯೇ ಎನ್ನುವುದನ್ನು ಸಂಶಯದಿಂದ ನೋಡುವಂತದಾಗಿದೆ . ಅಲ್ಲದೆ ಪೊಲೀಸ್ ಮೇಲಾಧಿಕಾರಿಗಳು ಕೂಡಾ ಸರಿಯಾಗಿ ತನಿಖೆ ನಡೆಸದೆ ಸರ್ಕಾರದ ನಿರ್ದೇಶನದಂತೆ ಪಕ್ಷಪಾತ ಧೋರಣೆ ಮಾಡುತ್ತಿರುವ ರೀತಿ ನನ್ನನ್ನು ಚಕಿತಗೊಳಿಸಿದೆ ಎಂದರು.
No comments