ಮಂಗಳೂರು ಅಕ್ರಮವಾಗಿ ದಾಖಲೆಗಳು ಇಲ್ಲದೆ ಬಂದಿಳಿದ ಮಕ್ಕಳು ಕಲ್ಯಾಣ ಸಮಿತಿ ವಶಕ್ಕೆ
ಮಂಗಳೂರು : ಇತ್ತೀಚೆಗೆ ಅಸ್ಸಾಂನಿಂದ ನೂರಾರು ಮಕ್ಕಳು ಬೆಂಗಳೂರು ರೈಲು ನಿಲ್ದಾಣಕ್ಕೆ ಬಂದಿಳಿದಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮಂಗಳೂರಿಗೂ ಮಕ್ಕಳ ತಂಡವೊಂದು ಬಂದಿಳಿದಿದೆ. ವಾರಸುದಾರರಿಲ್ಲದ ೧೪ ಮಕ್ಕಳು ನಿನ್ನೆ ಮಂಗಳೂರು ರೈಲು ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಸುಮಾರು ೭ರಿಂದ ೧೪ ವರ್ಷ ಪ್ರಾಯದ ಮಕ್ಕಳನ್ನು ಗುರುತಿಸಿದ ರೈಲ್ವೆ ಪೊಲೀಸರು ಅವರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಿದ್ದಾರೆ.
ಬಿಹಾರದಿಂದ ಮಂಗಳೂರಿಗೆ ನಿನ್ನೆ ಬಂದಿಳಿದ ಈ ಮಕ್ಕಳು ಕೇರಳದ ಉದ್ಯಾವರದಲ್ಲಿರುವ ಮಸೀದಿಯಲ್ಲಿ ಶಿಕ್ಷಣಕ್ಕೆ ತೆರಳುತ್ತಿದ್ದರೆಂದು ತಿಳಿದುಬಂದಿದೆ. ಎಳೆಯ ಪ್ರಾಯದ ಮಕ್ಕಳನ್ನು ಪಾಲಕರು ಅಥವಾ ವಾರಸುದಾರರಿಲ್ಲದೆ ದೂರದ ಮಂಗಳೂರಿಗೆ ಕಳುಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮಕ್ಕಳನ್ನು ಮಂಗಳೂರಿನ ಬೊಂದೇಲ್‌ನಲ್ಲಿರುವ ಬಾಲ ಸಂರಕ್ಷಣಾ ಕೇಂದ್ರದಲ್ಲಿರಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ .
No comments