Breaking News

ಎಎಸ್‌ಐ ಕೊಲೆಯತ್ನ ನಡೆಸಿದ ಇಬ್ಬರ ಬಂಧನ



ಮಂಗಳೂರು :  ಜುಲೈ ೧೯ರಂದು ಪಣಂಬೂರು ಠಾಣಾ ಎಎಸ್‌ಐ ಪುರಂದರ ಗೌಡ ಮತ್ತು ಹೆಚ್.ಸಿ.ಸತೀಶ್ ಅವರ ಮೇಲೆ ಕಾರನ್ನು ಚಲಾಯಿಸಿ ಕೊಲೆಗೆ ಪ್ರಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗ್ರೆ ನಿವಾಸಿ ಹ್ಯಾರೀಸ್ ಯಾನೆ ಚಂದು(೨೬) ಹಾಗೂ ಕಸ್ಬಾ ಬೆಂಗ್ರೆಯ ಮೊಯ್ದಿನ್ ಆದಿಲ್(೨೦) ಬಂಧಿತ ಆರೋಪಿಗಳು.
ಆರೋಪಿಗಳಿಂದ ಬಂಟ್ವಾಳ, ಸುರತ್ಕಲ್ ಮಂಗಳೂರು ಉತ್ತರ ಹಾಗೂ ದಕ್ಷಿಣ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳಿಂದ ೩.೦೫ ಲಕ್ಷ ರೂ. ಮೌಲ್ಯದ ಒಟ್ಟು ಏಳು ದ್ವಿಚಕ್ರ ವಾಹನಗಳು ಹಾಗೂ ೨೫ ಸಾವಿರ ರೂ. ಮೌಲ್ಯದ ಒಂದು ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಪಣಂಬೂರು ಠಾಣೆಯಲ್ಲಿ ೩ ಪ್ರಕರಣ, ಮಂಗಳೂರು ದಕ್ಷಿಣ ಠಾಣೆಯಲ್ಲಿ ೧೦ ಪ್ರಕರಣ, ಸುರತ್ಕಲ್ ಠಾಣೆಯಲ್ಲಿ ೨ ಪ್ರಕರಣ, ಬಕ್ರೆ ಠಾಣೆಯಲ್ಲಿ ೨, ಮಂಗಳೂರು ಉತ್ತರ ಠಾಣೆಯಲ್ಲಿ ೩ ಪ್ರಕರಣ ಸೇರಿ ಒಟ್ಟು ೨೦ ಹಳೆ ಪ್ರಕರಣಗಳು ಬಯಲಿಗೆ ಬಂದಿವೆ.

No comments