Breaking News

ಮಸಾಜ್ ಪಾರ್ಲರ್ ದಾಳಿ ಬೆನ್ನಲೇ ಅದೃಷ್ಟ ಚೇಂಜ್ ಇದು ಮೇಯರ್ ಕಮಾಲ್ ?ಮಂಗಳೂರು : ಮುಲ್ಕಿ-ಮೂಡಬಿದಿರೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಕವಿತಾ ಸನೀಲ್  ಎಂಬ ಮೆಸೇಜ್ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿ ಬರಿ ಸಡ್ಡು ಮಾಡುತ್ತಿದೆ .

ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಸುದ್ದಿ 
ಕಾಂಗ್ರೆಸ್  ಉಸ್ತುವಾರಿ ವೇಣುಗೋಪಾಲ್ ಜಿಲ್ಲೆಗೆ ಭೇಟಿ ನೀಡಿದ ಬಳಿಕ ಕಾಂಗ್ರೆಸ್ ನಲ್ಲಿ  ಮಹತ್ವದ ಬೆಳವಣಿಗೆ ನಡೆದಿದ್ದು ಕಾಂಗ್ರೆಸ್ ನ ಪ್ರಭಾವಿ ಬಿಲ್ಲವ ನಾಯಕರಾದ ಜನಾರ್ಧನ ಪೂಜಾರಿಯವರು ಮುನಿಸಿಕೊಂಡು ಕಾಂಗ್ರೆಸ್ ತೊರೆಯುವ ಮುನ್ಸೂಚನೆಯನ್ನು ಅರಿತ ಕಾಂಗ್ರೆಸ್ ನಾಯಕರು ಬಿಲ್ಲವ ಸಮಾಜದ ಓಲೈಕೆಗೆ ಮುಂದಾಗಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ ಜಿಲ್ಲೆಯಲ್ಲಿ 2 ಬಂಟ ಹಾಗೂ 2 ಬಿಲ್ಲವ ಅಭ್ಯರ್ಥಿಗೆ ಸೀಟು ನೀಡಲು ತೀರ್ಮಾನಿಸಿದ್ದು ಬಂಟ್ವಾಳದಲ್ಲಿ ರಮಾನಾಥ ರೈಗೆ ಸೀಟು ಖಚಿತವಾಗಿದ್ದು ಪುತ್ತೂರು ಕ್ಷೇತ್ರದಲ್ಲಿ ಶಕುಂತಳಾ ಶೆಟ್ಟಿಗೆ ಈ ಬಾರಿ ಸೀಟು ಸಿಗೋದು ಅನುಮಾನ ಅವರ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ನಲ್ಲಿ  ಅಸಮಾಧಾನ ತಾಂಡವವಾಡುತ್ತಿರುವ ಸಂದರ್ಭದಲ್ಲಿ ರಮಾನಾಥ ರೈ ಆಪ್ತ ಚಂದ್ರಪ್ರಕಾಶ ಶೆಟ್ಟಿ ತುಂಬೆ ಅಭ್ಯರ್ಥಿಯ ರೇಸ್ ನಲ್ಲಿದ್ದಾರೆ ಆದರೆ ಈ ಬಾರಿ ಇಂಟಕ್ ಗೆ ಜಿಲ್ಲೆಯಲ್ಲಿ 1 ಸೀಟ್ ಕೊಡುವ ಭರವಸೆಯನ್ನು ಸಿಎಂ ಸಿದ್ದರಾಮಯ್ಯ ನೀಡಿರುವುದರಿಂದ ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿಯವರಿಗೆ ಸೀಟು ಕೊಡಿಸಲು ಮುತ್ತಪ್ಪ ರೈಯವರು ಟೊಂಕ ಕಟ್ಟಿ ನಿಂತಿದ್ದಾರೆ.ಇನ್ನು ಬಿಲ್ಲವರ ಮತವನ್ನು  ಸೆಳೆಯುವ ಬಗ್ಗೆ ರಣತಂತ್ರ ಹೂಡಿರುವ ಕಾಂಗ್ರೆಸ್ ಬೆಳ್ತಂಗಡಿಯಲ್ಲಿ ವಸಂತ ಬಂಗೇರಾರವರಿಗೆ ಸೀಟು ನಿಶ್ಚಿತವಾಗಿದ್ದು ಇನ್ನೊಂದು ವಿಧಾನಸಭಾ ಕ್ಷೇತ್ರದಲ್ಲಿ ಬಿಲ್ಲವರಿಗೆ ಸೀಟು ನೀಡಬೇಕಾದ ಅನಿವಾರ್ಯತೆಯಲ್ಲಿದ್ದು ರಮಾನಾಥ ರೈಯವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಅವರಿಗೂ ಬಿಲ್ಲವರ ಓಲೈಕೆ ಅತ್ಯಗತ್ಯ ಹಾಗಾಗಿ ಬಿಲ್ಲವ ಮತದಾರರು ಹೆಚ್ಚಾಗಿರುವ ಮುಲ್ಕಿ-ಮೂಡಬಿದಿರೆಯಲ್ಲಿ ಕಾಂಗ್ರೆಸ್ ಗೆ ಈ ಬಾರಿ ಹೊಸ ಅಭ್ಯರ್ಥಿಯ ಅವಶ್ಯಕತೆ ಇದ್ದು ಹಾಲಿ ಶಾಸಕರಾದ ಅಭಯಚಂದ್ರ ಜೈನ್ ರಾಜಕೀಯವಾಗಿ ನಿವೃತ್ತಿ ಪಡೆಯುತ್ತಿದ್ದು ಅವರ ಉತ್ತರಾಧಿಕಾರಿಯಾಗಿ ಮಿಥುನ್ ರೈಯವರಿಗೆ ಅವಕಾಶಗಳು ಒಲಿದು ಬಂದ ಸಂದರ್ಭದಲ್ಲಿ ಮೂಡಬಿದಿರೆಯ ಕಾಂಗ್ರೆಸ್ ಕಾರ್ಯಕರ್ತರ ವಿಶ್ವಾಸ ಗೆಲ್ಲುವಲ್ಲಿ ವಿಫಲರಾಗಿದ್ದಾರೆ ಅವರ ಕಾರ್ಯಶೈಲಿ ಯಾರಿಗೂ ಹಿಡಿಯದಿರುವುದರಿಂದ ಕಾಂಗ್ರೆಸ್ ಗೆ ತಲೆನೋವು ಆಗಿರುವ ಈ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಎನ್ನುವಂತೆ ಸದ್ಯ ರಾಜ್ಯದಾದ್ಯಂತ ಸುದ್ದಿಯಲ್ಲಿರುವ ಮಂಗಳೂರಿನ ಅಕ್ರಮಗಳಿಗೆ ಕಡಿವಾಣ ಹಾಕಿರುವ ಲೇಡಿ ಸಿಂಗಂ ಮಂಗಳೂರಿನ ಮೇಯರ್ ಕವಿತಾ ಸನೀಲ್ ಉತ್ತಮ ಆಯ್ಕೆಯಾಗಿದೆ ಜೊತೆಗೆ ಜಿಲ್ಲೆಯಲ್ಲಿ ಎಕೈಕ ಮಹಿಳಾ ಅಭ್ಯರ್ಥಿಯಾಗಿ ಹೊರಹೊಮ್ಮಲಿದ್ದಾರೆ ಈ ಮೂಲಕ  ಕಾಂಗ್ರೆಸ್ ಒಂದೇ ಏಟಿಗೆ ಎರಡು ಹಕ್ಕಿಯನ್ನು ಹೊಡೆದಿದೆ, ಮೇಯರ್ ಕವಿತಾ ಸನೀಲ್ ಬಗ್ಗೆ ಸಾರ್ವಜನಿಕವಾಗಿ ಉತ್ತಮ ಅಭಿಪ್ರಾಯವಿದ್ದು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಗೆಲ್ಲುವ ಅಭ್ಯರ್ಥಿಯಾಗಿದ್ದಾರೆ.ಕವಿತಾ ಸನೀಲ್ ಈ ಕ್ಷೇತ್ರದ ಅಭ್ಯರ್ಥಿಯಾಗುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಪರಿಶೀಲಿಸುತ್ತಿದೆ ಎನ್ನಲಾಗಿದೆ.ಈ ಬಗ್ಗೆ ಸರ್ವೆ ರಿಪೋರ್ಟ್ ಹೈಕಮಾಂಡ್ ಕೈ ಸೇರಿದೆ,ಅವರ   ಕ್ರೀಯಾಶೀಲ ಕಾರ್ಯವೈಖರಿಗೆ ಮೆಚ್ಚಿದ್ದು. *ಶಕುಂತಳಾ ಶೆಟ್ಟಿಗೆ ಪುತ್ತೂರು ಕ್ಷೇತ್ರದಿಂದ ಕೊಕ್ ಕೊಟ್ಟು ಮಹಿಳಾ ಮತ್ತು ಬಿಲ್ಲವ ಕೋಟಾದಲ್ಲಿ ಕವಿತಾ ಸನೀಲ್ ಮುಲ್ಕಿ-ಮೂಡಬಿದರೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗುವ ಅವಕಾಶ ಹೆಚ್ಚು ಎನ್ನಲಾಗಿದೆ*

No comments