Breaking News

ರಾಜೀನಾಮೆಗೆ ಮುನ್ನ ನಿತೀಶ್ ಲಾಲೂಗೆ ಫೋನ್ ಮಾಡಿ ಏನು ಮಾತನಾಡಿದ್ದರು ಗೊತ್ತೇಪಾಟ್ನಾ :  ಲಾಲೂಜಿ ನನ್ನನ್ನು ಕ್ಷಮಿಸಿ. 20 ತಿಂಗಳು ಮೈತ್ರಿಕೂಟದ ಸರ್ಕಾರ ನಡೆಸಿದ್ದೇನೆ. ಆದರೆ ಅದನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ನಾನು ರಾಜೀನಾಮೆ ನೀಡುತ್ತಿದ್ದೇನೆ. ಇದು ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್.ಜೆ.ಡಿ. ನಾಯಕ ಲಾಲೂ ಪ್ರಸಾದ್ ಯಾದವ್‌ಗೆ ದೂರವಾಣಿ ಮೂಲಕ ಹೇಳಿದ ಮಾತು.

ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಾಘಟ ಬಂಧನದಿಂದ ಹೊರಬಂದು ರಾಜೀನಾಮೆ ನೀಡುವುದಕ್ಕೆ ಕೇವಲ 10 ನಿಮಿಷಗಳ ಮುಂಚೆ ಲಾಲೂ ಪ್ರಸಾದ್ ಯಾದವ್‌ಗೆ ಫೋನ್ ಮಾಡಿ ಮೇಲಿನಂತೆ ಹೇಳಿದ್ದಾರೆ.

ಆರ್.ಜೆ.ಡಿ., ಕಾಂಗ್ರೆಸ್ ಮೈತ್ರಿ ಮುರಿದುಕೊಂಡದ್ದು ಮತ್ತೆ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಯಲ್ಲಿ ಸರ್ಕಾರ ರಚಿಸಿದ್ದು, ಮಾರನೇ ದಿನವೇ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದದ್ದು ಮಂತ್ರಿ ಮಂಡಳ ವಿಸ್ತರಿಸಿದ್ದು, ಈಗ ಇತಿಹಾಸ.

ಮೈತ್ರಿ ಪಕ್ಷಗಳನ್ನು ನಿತೀಶ್ ಕುಮಾರ್ ನಡುನೀರಿನಲ್ಲಿ ಕೈಬಿಟ್ಟಿದ್ದು ಯಾಕೆ, ಜಾತ್ಯತೀತತೆಗೆ ಜೋತುಬಿದ್ದು ಮತೀಯತೆಯನ್ನು ಟೀಕಿಸಿದ್ದ ನಿತೀಶ್ ಕುಮಾರ್ ಮತ್ತೆ ಬಿಜೆಪಿಗೆ ಮರಳಿದ್ದು ಯಾಕೆ, ಎಂಬ ಚರ್ಚೆ ಈಗಾಗಲೇ ಹಳೆಯದಾಗಿದೆ.

ಜಾತ್ಯತೀತತೆ ಸೋಗಿನಲ್ಲಿ ಭ್ರಷ್ಟಾಚಾರವನ್ನು ಮರೆಮಾಚಲು ಸಾಧ್ಯವಿಲ್ಲ ಎಂಬ ನಿತೀಶ್ ಕುಮಾರ್‌ರ ಹೇಳಿಕೆ ಬಹುತೇಕ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಲಾಗಿದೆ.

ನರೇಂದ್ರ ಮೋದಿಯವರು ಲೋಕಕ್ಕೆ ಕ‌ಡಿವಾಣ ಹಾಕಲು ಲಾಲೂ ಮತ್ತು ಕಾಂಗ್ರೆಸ್ ಮೈತ್ರಿಗೆ ಮುಂದಾದ ನಿತೀಶ್ ಕುಮಾರ್ ಆ ಯತ್ನದಲ್ಲಿ ಯಶಸ್ವಿಯಾಗಿ 3ನೇ ಬಾರಿಗೆ ಮುಖ್ಯಮಂತ್ರಿಯಾದರೂ ಲಾಲೂ ಯಾದವ್‌ರ ಪರಿವಾರದ ಭ್ರಷ್ಟಾಚಾರವನ್ನು ಸಹಿಸಿಕೊಳ್ಳಲು ನಿತೀಶ್ ಕುಮಾರ್‌ಗೆ ಸಾಧ್ಯವಾಗಲಿಲ್ಲ ಎಂಬುದು ಒಟ್ಟು ಧ್ವನಿಯಾಗಿದೆ ಎಂದು ಮೂಲಗಳು ತಿಳಿಸಿವೆ.


loading...

No comments