Breaking News

ಕಾಮುಕ ರೋಡ್ ರೋಮಿಯೋ ಬಂಧನ


ಫೇಸ್ಬುಕ್ಕಿನಲ್ಲಿ ಬುದ್ಧಿ ಕಲಿಸಿದ ಮಂಗಳೂರು ಯುವತಿ

ಮಂಗಳೂರು :ಮಂಗಳೂರಿನ ಯುವತಿ ಧೈರ್ಯದಿಂದ ಸಾಮಾಜಿಕ ತಾಣದಲ್ಲಿ ತನ್ನನ್ನು ಹಿಂಬಾಲಿಸಿದ ಅಪರಿಚಿತ ವ್ಯಕ್ತಿಗೆ ಸವಾಲೊಡ್ಡಿ ಇದೀಗ ಕಾಮುಕ ಪುಂಡನನ್ನು ಜೈಲಿಗೆ ಅಟ್ಟಿದ್ದಾಳೆ .
“ನಾನು ಭಯಪಟ್ಟಿದ್ದೇನೆ ಎಂದುಕೊಂಡಿದ್ದೀಯಾ ? ನಾಚಿಕೆಯಾಗುತ್ತದೆ ಎಂದುಕೊಂಡಿದ್ದೀಯಾ ?” ಎಂದು ತನ್ನನ್ನು ಹಿಂಬಾಲಿಸಿದ ಅಪರಿಚಿತ ವ್ಯಕ್ತಿಯ ಬೈಕ್ ವಿವರಗಳನ್ನು ಫೇಸ್ಬುಕ್ಕಿನಲ್ಲಿ ಹಾಕಿದ್ದರು .ಇದು ಸಾಮಾಜಿಕ ಜಾಲ ತಾಣದಲ್ಲಿ ಬಾರಿ ಸದ್ದು ಮಾಡಿತ್ತು .
ಘಟನೆ ಸಂಬಂಧಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಪಾಂಡೇಶ್ವರ ಮಹಿಳಾ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಜೆಪ್ಪು ನಿವಾಸಿ ರಿಝ್ವಾನ್ ಅರ್ಷದ್(೧೯) ಎಂದು ಹೆಸರಿಸಲಾಗಿದೆ. ಈತ ಮೂರು ದಿನಗಳ ಹಿಂದೆ ಅಲೋಶಿಯಸ್ ಕಾಲೇಜಿನ ಬಳಿಯಿಂದ ಬಲ್ಮಠವರೆಗೆ ನಡೆದುಕೊಂಡು ಹೋಗುತ್ತಿದ್ದಾಗ ರಶ್ಮಿ ಹಿಂದೆಯೇ ಆಕ್ಟಿವಾದಲ್ಲಿ ಬಂದ ಯುವಕನೊಬ್ಬ ಹಾರ್ನ್ ಮಾಡಿ ಆಕೆಯನ್ನೇ ದಿಟ್ಟಿಸಿ ನೋಡುತ್ತಿದ್ದ. ಇದು ಪದೇ ಪದೇ ಮುಂದುವರಿದಾಗ ಆಕೆ ಆತನ ಸ್ಕೂಟರ್‌ನ ಫೊಟೋ ತೆಗೆದಿದ್ದಳು. ಬಳಿಕ ಅದರಲ್ಲಿದ್ದ ನೋಂದಣಿ ಸಂಖ್ಯೆ ಆಧಾರದಲ್ಲಿ ಸ್ಕೂಟರ್‌ನ ಮಾಲೀಕತ್ವದ ವಿವರಗಳನ್ನು ಶೋಧಿಸಿ ಎಫ್‌ಬಿಯಲ್ಲಿ ಹಾಕಿದ್ದಳು.


No comments