Breaking News

ಭಯೋತ್ಪಾದಕರಿಗೆ ಉತ್ತೇಜನ ನೀಡಿದರೆ ಅದರ ಪರಿಣಾಮ ಪಾಕ್ ಎದುರಿಸಬೇಕಾಗುತ್ತದೆ : ಅಮೆರಿಕ ಸಂಸದ


ವಾಷಿಂಗ್ ಟನ್:  ಭಯೋತ್ಪಾದಕರಿಗೆ  ಉಗ್ರಗಾಮಿ ಚಟುವಟಿಕೆಗಳಿಗೆ ಪಾಕಿಸ್ತಾನ ತನ್ನ ನೆಲದಲ್ಲಿ ಉತ್ತೇಜನ ನೀಡಬಾರದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ ಅಮೆರಿಕದ ಪ್ರಭಾವಿ ಸಂಸದ ಟೆಡ್ ಪೋಯಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭಯೋತ್ಪಾದನೆ ಕುರಿತ ಸಂಸತ್ ಉಪಸಮಿತಿಯ ಅಧ್ಯಕ್ಷರೂ ಆಗಿರುವ ಟೆಡ್ ಪೋಯಿ, ಈ ಹಿಂದಿನಿಂದಲೂ ಪಾಕಿಸ್ತಾನದ ವಿರುದ್ಧ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಆರೋಪ ಮಾಡುತ್ತಿದ್ದು, ಈಗ ಉಗ್ರವಾದ ಉತ್ತೇಜಿಸುತ್ತಿರುವುದಕ್ಕೆ ಪಾಕ್ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನವನ್ನು ಭಯೋತ್ಪಾದನೆಯ ಉತ್ತೇಜಕ ರಾಷ್ಟ್ರ ಎಂದು ಘೋಷಿಸಬೇಕೆಂದು ಅಮೆರಿಕ ಸಂಸದ ಟೆಡ್ ಪೋಯಿ ಅಮೆರಿಕ ಕಾಂಗ್ರೆಸ್ ನ್ನು ಆಗ್ರಹಿಸಿದ್ದು, ಉಗ್ರವಾದ ಉತ್ತೇಜಿಸುತ್ತಿರುವುದಕ್ಕೆ ಪಾಕಿಸ್ತಾನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪೋಯಿ ಎಚ್ಚರಿಕೆ ನೀಡಿದ್ದಾರೆ.

No comments