Breaking News

ಮದನಿಗೆ ಭದ್ರತಾ ವೆಚ್ಚ 14.79 ಲಕ್ಷ ರೂ ನೀಡಲು ಸಿದ್ಧ; ಪಿಣರಾಯಿ

ತಿರುವನಂತಪುರ: ಬೆಂಗಳೂರು ಸರಣಿ ಸ್ಫೋಟ ಸಂಬಂಧ ಜೈಲು ಪಾಲಾಗಿರುವ ಪೀಪಲ್ಸ್‌ ಡೆಮೆಕ್ರೊಟಿಕ್‌ ಪಕ್ಷದ ನಾಯಕ ಅಬ್ದುಲ್‌ ನಾಸಿರ್‌ ಮದನಿ ಕೇರಳ ಪ್ರವಾಸದ ಭದ್ರತಾ ವೆಚ್ಚ ಭರಿಸುವುದಾಗಿ ಕೇರಳ ಸರ್ಕಾರ  ಹೇಳಿದೆ. ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಆ. 9ರಂದು ಮದನಿಯ ಪುತ್ರನ ವಿವಾಹ ನಡೆಯಲಿದ್ದು, ಅದರಲ್ಲಿ ಭಾಗವಹಿಸಲು ಅನುಮತಿ ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಅದನ್ನು ನ್ಯಾಯಾಲಯ ಪುರಸ್ಕರಿದೆ. ಮದನಿ ಪ್ರವಾಸದ ಭದ್ರತಾ ವೆಚ್ಚವಾಗಿ 14.79 ಲಕ್ಷ ರೂ. ನೀಡಬೇಕೆಂದು ಕರ್ನಾಟಕದ ಪೊಲೀಸ್‌ ಇಲಾಖೆ ಕೇಳಿದೆ.
ಈ ಬಗ್ಗೆ ಪಿಡಿಪಿ ಕೇರಳ ಘಟಕವು ಸಿಎಂ ಪಿಣರಾಯಿ ವಿಜಯನ್‌ ಗಮನಕ್ಕೆ ತಂದಿತ್ತು. ಈ ಹಿನ್ನೆಲೆಯಲ್ಲಿ ವಿಜಯನ್‌ ಕರ್ನಾಟಕ ಮುಖ್ಯಮಂತ್ರಿಗೆ ಪತ್ರ ಬರೆದು ಮದನಿ ಪ್ರವಾಸದ ಭದ್ರತಾ ವೆಚ್ಚವನ್ನು ಕೇರಳ ಪೊಲೀಸರೇ ನೀಡುತ್ತಾರೆ. ಆದರೆ ಭದ್ರತಾ ವೆಚ್ಚದ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

No comments