Breaking News

ಆ.22ರಂದು ಬ್ಯಾಂಕ್ ಮುಷ್ಕರ



ನವದೆಹಲಿ : ಕೇಂದ್ರ ಸರಕಾರದ ಕೆಲವು ಪ್ರಸ್ತಾವಿತ ಸುಧಾರಣಾ ಕ್ರಮಗಳನ್ನು ಖಂಡಿಸಿ ಬ್ಯಾಂಕ್ ನೌಕರರು ಆ. ೨೨ರಂದು ದೇಶವ್ಯಾಪಿ ಮುಷ್ಕರ ನಡೆಸಲಿದ್ದಾರೆ.
ಸುಧಾರಣೆ ಹೆಸರಿನಲ್ಲಿ ಕೇಂದ್ರ ಸರಕಾರ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಸರಕಾರಿ ಸ್ವಾಮ್ಯದ ಎಲ್ಲ ಬ್ಯಾಂಕ್‌ಗಳನ್ನೂ ಒಂದೇ ಬ್ಯಾಂಕಿಂಗ್ ಹೂಡಿಕೆ ಕಂಪೆನಿಯ ಅಡಿ ತರಲೆಂದೇ ಬ್ಯಾಂಕ್ ಬೋರ್ಡ್ ಬ್ಯೂರೋವನ್ನು ರಚಿಸಲಾಗಿದೆ.
ಇದರ ಮೂಲಕ ಸರಕಾರಿ ಬ್ಯಾಂಕ್‌ಗಳಲ್ಲಿನ ಷೇರುಗಳನ್ನು ಶೇ. ೫೦ಕ್ಕಿಂತಲೂ ಕಡಿಮೆಗೊಳಿ ಸುವ ಮೂಲಕ ಖಾಸಗಿ ವಲಯಕ್ಕೆ ಮಣೆ ಹಾಕಲು ಮುಂದಾಗಿದೆ ಎಂದು ಮುಷ್ಕರಕ್ಕೆ ಕರೆ ನೀಡಿರುವ ಯುನೈಟೆಡ್ ಫೋರಂ ಆಫ್ ಬ್ಯಾಂಕಿಂಗ್ ಯೂನಿಯನ್ಸ್ ತಿಳಿಸಿದೆ.
ಈಗಾಗಲೇ ೭ ಲಕ್ಷ ಕೋಟಿ ರೂ. ವಸೂಲಾಗದ ಸಾಲದಿಂದಾಗಿ ಬ್ಯಾಂಕ್‌ಗಳು ದಿವಾಳಿಯತ್ತ ಸಾಗಿವೆ. ವಸೂಲಿಯತ್ತ ಮುಖ ಮಾಡುವ ಬದಲು ಸಾಲ ಮಾಫಿಯ ಆಶ್ರಯ ಪಡೆಯಬೇಕಾದ ಸ್ಥಿತಿಯಿದೆ. ಕೇಂದ್ರ ಸರಕಾರದ ಸುಧಾರಣಾ ಕ್ರಮಗಳು ಇದಕ್ಕೆ ಮತ್ತಷ್ಟು ಉತ್ತೇಜನ ನೀಡಲಿವೆ ಎಂದು ಆರೋಪಿಸಲಾಗಿದೆ.

No comments