ಮೌಲ್ವಿಗಳು ಮಸೀದಿಗಳ ಮಾಲೀಕರಲ್ಲ ಅಲ್ಲಾ ಮಾತ್ರ ಅದರ ಮಾಲೀಕ : ಒವೈಸಿ
ಹೈದರಾಬಾದ್: ಮೌಲ್ವಿಗಳು ಹೇಳಿದ ತಕ್ಷಣ, ಮಸೀದಿಗಳನ್ನು ಯಾರೂ ಕೂಡ ಸುಲಭವಾಗಿ ಹಸ್ತಾಂತರಿಸುವಂತಿಲ್ಲ. ಏಕೆಂದರೆ ಪ್ರಾರ್ಥನಾ ಕೇಂದ್ರಗಳು ಅಲ್ಲಾನ ಒಡೆತನದಲ್ಲಿರುತ್ತದೆ’ ಎಂದು ಆಲ್ ಇಂಡಿಯಾ ಮಜ್ಲಿಸ್ ಇ–ಇತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಅಯೋಧ್ಯೆಯ ವಿವಾದಿತ ಸ್ಥಳದಿಂದ ದೂರದಲ್ಲಿ ಮುಸಲ್ಮಾನರು ಪ್ರಾಬಲ್ಯವಿರುವ ಜಾಗದಲ್ಲಿ ಮಸೀದಿ ನಿರ್ಮಿಸಬಹುದು ಎಂದು ಶಿಯಾ ವಕ್ಫ್ ಬೋರ್ಡ್ ಸುಪ್ರೀಂಕೋರ್ಟ್‌ಗೆ ತಿಳಿಸಿರುವ ಹಿನ್ನೆಲೆಯಲ್ಲಿ ಒವೈಸಿ ಈ ಹೇಳಿಕೆ ನೀಡಿದ್ದಾರೆ.
ಶಿಯಾ, ಸುನ್ನಿ, ಬರೆಲ್ವಿ, ಸೂಫಿ, ದಿಯೋಬಂದಿ, ಸಲಾಫಿ, ಬೋಹ್ರಿಯವರು ಮಸೀದಿಗಳನ್ನು ನಿರ್ವಹಿಸುತ್ತಿದ್ದಾರೆ. ಅವರೂ ಯಾರೂ ಅದರ ಮಾಲೀಕರಲ್ಲ. ಅಲ್ಲಾ ಮಾತ್ರ ಅದರ ಮಾಲೀಕ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯೂ (ಎಐಎಂಪಿಎಲ್‌ಬಿ) ಮಸೀದಿಗಳನ್ನು ಯಾರಿಗೂ ನೀಡುವಂತಿಲ್ಲ ಎಂದರು.
No comments