ಯಡಿಯೂರಪ್ಪ, ಈಶ್ವರಪ್ಪ ಮೇಲೂ ಐಟಿ ರೇಡ್ ಮಾಡ್ಲಿ: ಸಿಎಂ
ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಗೆ ಸಂಬಂಧಪಟ್ಟಂತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ಇದ್ದರೆ ದಾಖಲೆ ಇದ್ದರೆ ಯಾರ ಮೇಲಾದ್ರೂ ಐಟಿ ರೇಡ್ ನಡೆಸಲಿ ಬಿಜೆಪಿಯವರ ಮೇಲೂ ಐಟಿ ರೇಡ್ ಮಾಡಲಿ. ಬಿಜೆಪಿಯಲ್ಲಿ ಯಾರೂ ಇಲ್ವಾ? ಯಡಿಯೂರಪ್ಪ ಅವರ ಮೇಲೆ ಸಾಕಷ್ಟು ಆರೋಪಗಳಿವೆ. ಈಶ್ವರಪ್ಪ ದುಡ್ಡು ಎಣಿಸುವ ಮಶೀನ್ ಇಟ್ಕೊಂಡಿದ್ದರು. ಹೋಗಿ ಈಶ್ವರಪ್ಪ ಮೇಲೆ ಐಟಿ ದಾಳಿ ಮಾಡಲಿ ಎಂದು ಕಿಡಿಕಾರಿದರು.
ಇದೇ ವೇಳೆ ಅವರು ಇದು ರಾಜಕೀಯಪ್ರೇರಿತ ದಾಳಿ.
ಡಿ.ಕೆ ಶಿವಕುಮಾರ್ ನಮ್ಮ ಸಚಿವ ಸಂಪುಟ ಸಹೋದ್ಯೋಗಿ. ರೇಡ್ ಮಾಡುವಾಗ ಸಿಆರ್ಪಿಎಫ್ ಕರೆಸಿದ್ದು ತಪ್ಪು. ಐಟಿ ಕಾಯ್ದೆಯಲ್ಲೂ ಈ ಬಗ್ಗೆ ಸ್ಪಷ್ಟ ಉಲ್ಲೇಖ ಇಲ್ಲ. ಕೇಂದ್ರದ ಅಧಿಕಾರಿಗಳ ಸಹಾಯ ಪಡೆಯಬಹುದು ಅಂತಿದೆ.
ಅದು ಸಿಆರ್ಪಿಎಫ್ ಅಂತೇನಿಲ್ಲ. ಇದು ಸಂವಿಧಾನ ವಿರೋಧಿ. ಇದನ್ನು ನಾನು ಖಂಡಿಸ್ತೇನೆ ಅಂತಾ ಅವರು ಹೇಳಿದರು.
No comments