ಧರ್ಮ ವಿಭಜನೆಗೆ ನಾನು ಕಾರಣವಲ್ಲ: ಸಿದ್ದರಾಮಯ್ಯ
ಚಾಮರಾಜನಗರ : ಇಂದು ಮಧ್ಯಾಹ್ನ ಚಾಮರಾಜನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ವೀರಶೈವ-ಲಿಂಗಾಯಿತ ಧರ್ಮದ ಪ್ರತ್ಯೇಕದ ಬಗ್ಗೆ ಸರ್ಕಾರದ ಯಾವುದೇ ನಿಲುವು ಕಳೆದಿಲ್ಲ. ಜೊತೆಗೆ ಧರ್ಮ ವಿಭಜನೆಗೆ ನಾನು ಕಾರಣನಲ್ಲ. ವೀರಶೈವ ಮಹಾಸಭಾ ಹಾಗೂ ಮಾತೇ ಮಹಾದೇವಿ ಅವರು, ಮಾಡಿರುವ ಮನವಿ ಮೇರೆಗೆ ಕ್ರಮಕೈಗೊಳ್ಳಲು ಮುಂದಾಗಿದ್ದೆ. ಈ ಸಮಯದಲ್ಲಿ ನೀವಿಬ್ಬರೂ ಒಂದಾಗಿ ಬನ್ನಿ ಚರ್ಚೆ ನಡೆಸೋಣ ಎಂಬುದಾಗಿಯೂ ಹೇಳಿದ್ದೇನೆ. ಆದರೆ ವಿನಾಕಾರಣ ನನ್ನ ಮೇಲೆಯೇ ಆರೋಪ ಹೊರಿಸಲಾಗಿದೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಪ್ರತಿಪಾದಿಸಿದರು.
No comments