Breaking News

ಡಿಕೆಶಿಗೆ ಕೈ ಕೊಟ್ಟ ಹೈಕಮಾಂಡ್



ನವದೆಹಲಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಶೋಧಕ್ಕೆ ಒಳಗಾಗಿರುವ ಕರ್ನಾಟಕದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಸಮರ್ಥಿಸುವಾಗ ಎಚ್ಚರಿಕೆಯಿಂದ ಇರಬೇಕು ಎಂದು ರಾಜ್ಯ ಘಟಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ.
ಶಿವಕುಮಾರ್ ಅವರನ್ನು ಸಮರ್ಥಿಸುವಾಗ ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರಕ್ಕೆ ರಕ್ಷಣೆ ನೀಡುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ.
ಶಿವಕುಮಾರ್ ಅವರನ್ನು ನೇರವಾಗಿ ಸಮರ್ಥನೆ ಮಾಡಬಾರದು. ಬದಲಿಗೆ ಐ.ಟಿ ಶೋಧ ನಡೆದ ಸಮಯ ಮತ್ತು ಅದಕ್ಕೆ ಕೇಂದ್ರೀಯ ಪಡೆಗಳ ಬಳಕೆಯನ್ನು ಟೀಕಿಸಬೇಕು ಎಂದು ತಿಳಿಸಲಾಗಿದೆ.
'ನಮ್ಮ ಪಕ್ಷದ ಮುಖಂಡನ ವಿರುದ್ಧ ನಡೆಯುತ್ತಿರುವ ಐ.ಟಿ ಶೋಧವನ್ನು ಖಂಡಿಸಿದರೆ ತನಿಖಾ ಸಂಸ್ಥೆಯ ಕಾರ್ಯನಿರ್ವಹಣೆಗೆ ನಾವು ಅಡ್ಡಿ ಮಾಡಿದ್ದೇವೆ ಎಂದು ಬಿಜೆಪಿ ಹೇಳಬಹುದು.
ಕಪ್ಪು ಹಣವನ್ನು ವಿರೋಧಿಸುತ್ತೇವೆ ಎಂದು ನಾವು ಈಗಾಗಲೇ ಹೇಳಿದ್ದೇವೆ. ಹಾಗಾಗಿ ನಮ್ಮ ಪಕ್ಷದ ಮುಖಂಡನ ಮೇಲೆ ನಡೆದ ದಾಳಿಯನ್ನು ಟೀಕಿಸಲಾಗದು' ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

No comments