ಸತತ 72 ಗಂಟೆಯ ಐಟಿ ದಾಳಿ ಮುಕ್ತಾಯದ ಬೆನ್ನಲ್ಲೇ ದೇವಸ್ಥಾನಕ್ಕೆ ಹೊರಟ ಡಿಕೆಶಿ
ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ನಿವಾಸದ ಮೇಲೆ ದಾಳಿ ಮಾಡಿ ಸತತ 3 ದಿನಗಳಿಂದ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವ ಕಾರ್ಯಚರಣೆಯು ಅಂತಿಮ ಘಟ್ಟ ತಲುಪಿದ್ದು, 76 ಗಂಟೆಗಳ ಬಳಿ ಆದಾಯ ತೆರಿಗೆ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರ ಮನೆಯಿಂದ ವಾಪಸ್ಸು ತೆರಳಲು ಸಿದ್ದರಾಗುತ್ತಿದ್ದಾರೆ ಎನ್ನಲಾಗಿದೆ.
ಐಟಿ ಅಧಿಕಾರಿಗಳು ತಮ್ಮ ಕಾರ್ಯಚರಣೆಯ ವೇಳೆ ಡಿ.ಕೆ ಶಿವಕುಮಾರ್ ಹಾಗೂ ಕುಟುಂಬಸ್ಥರಿಂದ ವಶಪಡಿಸಿಕೊಂಡಿದ್ದ ಮೋಬೈಲ್ , ಕಾರು ಸೇರಿದಂತೆ ಕೆಲ ವಸ್ತುಗಳನ್ನು ವಾಪಸ್ಸು ನೀಡಿದ್ದಾರೆ ಅಂತಾ ತಿಳಿದು ಬಂದಿದೆ.
ಇದೇ ವೇಳೆ ಮೈಸೂರಿನಲ್ಲಿರುವ ಕಳೆದ ನಾಲ್ಕು ದಿವಸಗಳಿಂದ ಡಿಕೆಶಿ ಅವರ ಮಾವ ತಿಮ್ಮಯ್ಯ ಅವರ ಮನೆ ಮೇಲೆ ದಾಳಿ ಮಾಡಿ ವಿವಿಧ ದಾಖಲೆಗಳನ್ನು ಪರಿಶೀಲನೆ ಮಾಡಿದ ಬಳಿಕ ಇಂದು ತಿಮ್ಮಯ್ಯ ಅವರ ಮನೆಯಲ್ಲಿ ಕೂಡ ಐಟಿ ರೇಡ್ ಮುಕ್ತಾಯವಾಗಿದೆ.
ಇನ್ನು 76 ಗಂಟೆಯಿಂದ ಐಟಿ ಅಧಿಕಾರಿಗಳಿಂದ ವಿಚಾರಣೆಗೊಳಪಟ್ಟು, ಮನೆಯಲ್ಲಿದ್ದ ಡಿ.ಕೆ. ಶಿವಕುಮಾರು ಇಂದು ಮನೆಯಿಂದ ಹೊರ ಬಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಎಲ್ಲರಿಗೂ ನನ್ನ ಧನ್ಯವಾದಗಳು, ಈಗ ನಾನು ಏನನ್ನು ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ. ಘಟನೆ ವೇಳೆ ನನಗೆ ಬೆಂಬಲ ನೀಡಿದ ಪಕ್ಷದ ನಾಯಕರು, ಅಧಿಕಾರಿಗಳು, ವಿರೋಧ ಪಕ್ಷದ ನಾಯಕರುಗಳಿಗೆ ಧನ್ಯವಾದಗಳು ಅಂತಾ ಹೇಳಿದರು.
ಐಟಿ ವಿಚಾರಣೆಗೆ ಸಂಬಂಧಪಟ್ಟಂತೆ ಮಾತನಾಡಿದ ಅವರು ನಾನು ಕಾನೂನುನಿನ ಅಡಿಯಲ್ಲಿ ನನ್ನ ಕೆಲಸ ಮಾಡಿದ್ದು, ದೆಹಲಿ ಹಾಗೂ ಬೆಂಗಳೂರಿನಲ್ಲಿ ನಡೆದ ಐಟಿ ದಾಳಿ ಬಗ್ಗೆ ಆದಾಯ ಅಧಿಕಾರಿಗಳು ಪಂಚನಾಮೆ ನೀಡಿದ ಬಳಿಕ ನಾನು ಮಾಧ್ಯಮಗಳಿಗೆ ಹೇಳಿಕೆ ನೀಡುವೆ ಅಲ್ಲಿ ತನಕ ಕಾಯಲೇ ಬೇಕು ಅಂತಾ ಮಾಧ್ಯಮಗಳಿಗೆ ಹೇಳಿದರು.
ಈಗ ನಾನು ನಂಬಿರುವ ದೇವರಿಗೆ ಹೊರಟಿರುವೆ, ಅಂತಾ ಮಾಧ್ಯಮಗಳಿಗೆ ಹೇಳಿದರು. ಇದೇ ವೇಳೆ ಮಾಧ್ಯಮದವರು ಯಾವ ದೇವರಿಗೆ ಭೇಟಿ ನೀಡುವಿರೀ ಅಂತಾ ಪ್ರಶ್ನೆ ಮಾಡಿದ ವೇಳೆ ಅವರು ಉತ್ತರ ನೀಡಲು ನಿರಾಕರಿಸಿದರು.
ಇದೇ ವೇಳೆ ಅವರು ಗುಜರಾತ್ ನಿಂದ ನನ್ನ ನಂಬಿ ಬಂದಿರುವ ನನ್ನ ಪಕ್ಷದ ಶಾಸಕರನ್ನು ಭೇಟಿ ಮಾಡಬೇಕು, ಅಲ್ಲಿಗೆ ಹೋಗುವೆ.
ಘಟನೆ ಬಗ್ಗೆ ಮುಂದಿನ ದಿವಸದಲ್ಲಿ ತಿಳಿಸುವೆ ಅಂತಾ ಹೇಳಿದರು.
No comments