Breaking News

ಮುಸ್ಲಿಮರಿಗೆ ವರವಾಗಿ ಬಂದ ವರಮಹಾಲಕ್ಮಿ ಹಬ್ಬ ಧಾರ್ಮಿಕ ಸೌಹಾರ್ದತೆ ಮೆರೆದ ಮೈಸೂರು


ಹಿಂದುಗಳು ವರಮಹಾಲಕ್ಷ್ಮಿಹಬ್ಬ ಆಚರಿಸುವುದು ಸಂಪ್ರದಾಯ, ಆದರೆ ಇದೇ ಹಬ್ಬವನ್ನು ಮುಸ್ಲಿಂ ಬಾಂಧವರು ಆಚರಿಸಿದರೆ ಅದು ಖಂಡಿತ ಅಚ್ಚರಿ. ಮೈಸೂರಿನ ಹೆಗ್ಗಡದೇವನಕೋಟೆ ರಸ್ತೆಯಲ್ಲಿರುವ ಕೋಟೆ ಹುಂಡಿಯಲ್ಲಿನ ಮುಸ್ಲಿಂ ಮನೆಯೊಂದರಲ್ಲಿ ಶ್ರಾವಣ ಮಾಸದ ಎರಡನೇ ಶುಕ್ರವಾರದ ದಿನ ಪತಿ ಪತ್ನಿ ಇಬ್ಬರೂ ಸೇರಿ ವರಮಹಾಲಕ್ಷ್ಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ.'ಬದಲಾದ ಯಾಂತ್ರಿಕ ಜಗತ್ತಿನಲ್ಲಿ ಸಮಾಜದಲ್ಲಿ ಜನರಲ್ಲಿ ಪರಸ್ಪರ ವೈರುಧ್ಯದ ಭಾವನೆಗಳು ಹೆಚ್ಚಾಗುತ್ತಿವೆ. ಕೋಮುವಾದಿ ಭಾವನೆಗಳು ಹೆಚ್ಚಾಗುತ್ತಿವೆ. ಇವುಗಳಿಗೆ ಪರಿಹಾರವಾಗಿ ಜನರ ನಡುವೆ ಸಾಮರಸ್ಯ, ಏಕತೆ, ಸೌಹಾರ್ದತೆ ಭಾವನೆ ಮೂಡಿಸುವ ಸಲುವಾಗಿ ಸರ್ವ ಧರ್ಮದವರನ್ನು ಸೇರಿಸಿ ವರಲಕ್ಷ್ಮಿ ಹಬ್ಬ ಆಚರಿಸಲಾಗಿದೆ. ಎಲ್ಲರೂ ಒಟ್ಟಾಗಿ ಹಬ್ಬದ ಆಚರಣೆಯಲ್ಲಿ ತೊಡಗಿಸಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ.

 ಇದು ಮಹಿಳೆಯರು ಆಚರಿಸುವ ಮುಖ್ಯವಾದ ಹಬ್ಬವಾಗಿದೆ. ಹಾಗಾಗಿ ಈ ಸಂದರ್ಭದಲ್ಲಿ ಮಹಿಳೆಯರನ್ನು ಗೌರವಿಸಿ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ' ಎಂದು ಈ ಸಂದರ್ಭದಲ್ಲಿ ಕೆ.ಹರೀಶ್ ಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ನಗರಾಧ್ಯಕ್ಷ ಕೆ.ಹರೀಶ್ ಗೌಡ ಉಚಿತವಾಗಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ಸುಮಾರು 500 ಮಹಿಳೆಯರಿಗೆ ಸೀರೆ, ಅರಿಶಿನ ಕುಂಕುಮ, ಬಳೆ , ಹೂ ಹಣ್ಣು ವಿತರಿಸಿದರು.
ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಮಹಿಳೆಯರು ತಮ್ಮದಲ್ಲದ ಆಚರಣೆಯಲ್ಲಿ ಭಾಗವಹಿಸಿ ವಿಶೇಷ ಅನುಭವ ಪಡೆದರು. ವಿಶೇಷ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯದಲ್ಲಿ ಎಲ್ಲರಿಗೂ ಒಟ್ಟಾಗಿ ಪಾಲ್ಗೊಂಡಿದ್ದರಿಂದ ದೇವಾಲಯದ ಆವರಣದಲ್ಲಿ ವಿಶೇಷ ವಾತಾವರಣ ಸೃಷ್ಟಿಯಾಗಿತ್ತು.

Source :online

No comments