Breaking News

ಡಿಕೆಶಿ ಮನೆ ಪ್ರವೇಶಕ್ಕೆ ತಮ್ಮನಿಗೂ ನಿರ್ಬಂಧ



ಬೆಂಗಳೂರು :ಇಂಧನ ಸಚಿವ ಡಿ.ಕೆ ಶಿವಕುಮಾರ್ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದೂ ಪರಿಶೀಲನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಯಾರನ್ನೂ ಮನೆ ಒಳಗೆ ಬಿಡುತ್ತಿಲ್ಲ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ ಸಂಸದ ಡಿ.ಕೆ. ಸುರೇಶ್‌ರವರನ್ನು ನಿವಾಸಕ್ಕೆ ಬಿಟ್ಟಿಲ್ಲ.

ಇಂದು ಬೆಳಿಗ್ಗೆ ಆಗಮಿಸಿದ ಸಂಸದ ಸುರೇಶ್‌ರವರು ನಿವಾಸಕ್ಕೆ ತೆರಳುತ್ತಿದ್ದಂತೆ ಆದಾಯ ತೆರಿಗೆ ಅಧಿಕಾರಿಗಳು ಒಳ ಹೋಗದಂತೆ ಸೂಚಿಸಿದರು.
ವರಮಹಾಲಕ್ಷ್ಮಿ ಹಬ್ಬದ ಆಚರಣೆಗೆ ಬಂದಿರುವುದಾಗಿ ಡಿ.ಕೆ ಸುರೇಶ್ ಹೇಳಿದರೂ ನಿವಾಸಕ್ಕೆ ತೆರಳಲು ಅಧಿಕಾರಿಗಳು ಸಮ್ಮತಿಸಲಿಲ್ಲ. ಕೊನೆಗೆ ಸುರೇಶ್ ನಿರಾಶರಾಗಿ ವಾಪಸ್ಸಾದರು.



loading...

No comments