Breaking News

ಗುಜರಾತ್ ನಲ್ಲಿ ಜಲಪ್ರಳಯ ಕಾಂಗ್ರೆಸ್ ಶಾಸಕರ ರೆಸಾರ್ಟ್‌ ರಾಜಕೀಯಕ್ಕೆ ರಾಹುಲ್ ಗಾಂಧಿ ಕಾರ್ ಪುಡಿ


ಗುಜರಾತ್: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಗುಜರಾತ್ನ ಕೆಲವು ಜಿಲ್ಲೆಗಳು ನೀರಿನಿಂದ ಮುಳುಗಡೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದ್ದು ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ .

ಅತ್ತ ಗುಜರಾತ್ ನಲ್ಲಿ ಜಲಪ್ರಳಯಕ್ಕೆ ಜನರು ಪರದಾಡುತ್ತಾ ಇದ್ದರೆ ಚುನಾಯಿತ ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್ ನಲ್ಲಿ ಮೋಜು ಮಸ್ತಿ ಮಾಡುತ್ತಾ ಇದ್ದಾರೆ . ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ನಾಯಕರು ರೆಸಾರ್ಟ್ ರಾಜಕಾರಣ ಮಾಡುತ್ತಾ ಇರುವುದು ಗುಜರಾತ್ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.


 ಜಲಪ್ರಳಯ ಸಂಭಂದ ವಿಕ್ಷಣೆಗೆಂದು ತೆರಳಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಗುಜರಾತ್ ನಲ್ಲಿ ಪ್ರತಿಭಟನೆ ಬಿಸಿ ತಟ್ಟಿದೆ ಬನಸ್ಕಾಂತ್ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ತೆರಳುತ್ತಿದ್ದ ವಾಹನದ ಮೇಲೆ ಕಲ್ಲು ತುರಾಟ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಕಲ್ಲು ತುರಾಟಕ್ಕೆ ಕಾರ್ ನಾ ಗಾಜುಗಳು ಪುಡಿಯಾಗಿದ್ದು ರಾಹುಲ್ ಗಾಂಧಿಗೆ ಗಾಯಗಳಾದ ಬಗ್ಗೆ ವರದಿಯಾಗಿಲ್ಲ 

No comments