ಐಟಿ ದಾಳಿಗೆ ಯಾರೂ ಹೆದರಲ್ಲ’ : ಯುಟಿ ಖಾದರ್
ಮಂಗಳೂರು :‘ಅಧಿಕಾರ ಯಾವತ್ತೂ ಶಾಶ್ವತ ಅಲ್ಲ. ಅದನ್ನು ದುರುಪಯೋಗ ಮಾಡುವುದೂ ರಾಜಕೀಯಕ್ಕೆ ಶೋಭೆ ತರಲಾರದು ಭ್ರಷ್ಟಾಚಾರ ತಡೆಗೆ ನೈಜ ಕಾಳಜಿ ಇದ್ರೆ ಬಲಿಷ್ಠವಾದ ಲೋಕಪಾಲ್ ಮಸೂದೆ ಜಾರಿಮಾಡಲಿ’ ಎಂದು ಸಚಿವ ಯು.ಟಿ. ಖಾದರ್ ಸವಾಲು ಹಾಕಿದ್ದಾರೆ.
ಸಚಿವ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ಹಿನ್ನೆಲೆಯಲ್ಲಿ ನಿನ್ನೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದೆ. ರಾಜ್ಯ ಸರ್ಕಾರದ ಜನಪರ ಆಡಳಿತದಿಂದ ಬೇಸತ್ತು ಬ್ಲಾಕ್ ಮೇಲ್ ರಾಜಕೀಯ ಮಾಡ್ತಿದೆ ಎಂದು ಆರೋಪಿಸಿದರು. ಗುಜರಾತ್ ಶಾಸಕರು ರಕ್ಷಣೆಗಾಗಿ ನಮ್ಮಲ್ಲಿಗೆ ಬಂದಿದ್ದಾರೆ. ಅವರಿಗೆ ಆತಿಥ್ಯ ನೀಡುವುದು ನಮ್ಮ ಕರ್ತವ್ಯ. ಈ ದಾಳಿಯ ಎಲ್ಲಾ ವಿಚಾರವನ್ನು ಸಚಿವ ಡಿಕೆಶಿ ಎದುರಿಸಲು ಸಮರ್ಥರಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
loading...
No comments