Breaking News

ಸ್ವಾತಂತ್ರ್ಯ ದಿನಾಚರಣೆಯಂದೇ ಮಹಿಳೆ ಮೇಲೆ ಕೈ ಹಾಕಿದ ಹಾಲಿ ಕಾಂಗ್ರೆಸ್ ಸಚಿವ !ಮಡಿಕೇರಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಾ ಇದ್ದು ಮಹಿಳೆಯರು ರಸ್ತೆಯಲ್ಲಿ ಓಡಾಡಲು ಭಯದ ವಾತಾವರಣ ರಾಜ್ಯದಲ್ಲಿ ಸೃಷ್ಟಿಯಾಗಿದೆ .
ದಿನಕ್ಕೆ ಹೊಸ ಹೊಸ ಮಹಿಳಾ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಅದರಲ್ಲಿ ಹೆಚ್ಚಿನವು ರಾಜಕೀಯ ನಾಯಕ ಅನಿಸಿಕೊಂಡವರ ಕಿರುಕುಳಗಳೆ ಅಗ್ರಸ್ಥಾನದಲ್ಲಿದೆ .

ಜನರಿಂದ ಆಯ್ಕೆಯಾಗಿ ಜನರ ರಕ್ಷಣೆ ಮಾಡಬೇಕಾದ ಜನಪ್ರತಿನಿಧಿಗಳೆ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ತಲೆ ತಗ್ಗಿಸುವ ವಿಚಾರವಾಗಿದೆ .

ಕಳೆದ ಕೆಲವು ತಿಂಗಳ ಹಿಂದೆ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ಮಾಡುತ್ತಿರುವ ಸಂದರ್ಭದಲ್ಲಿ ಸಿಕ್ಕಿ ಬಿದ್ದರು ಸರಕಾರ ಅದನ್ನು ಸಮರ್ಥಿಸಿಕೊಂಡು ಆ ಸಚಿವನ ಬೆನ್ನಿಗೆ ನಿಂತಿತ್ತು ಇದೀಗ ಮತ್ತೆ ಇನ್ನೊಂದು ಮಹಿಳಾ ದೌರ್ಜನ್ಯ ಪ್ರಕರಣ ಸ್ವಾತಂತ್ರ್ಯ ದಿನಾಚರಣೆ ದಿನದಂದೇ ನಡೆದು ಹೋಗಿದ್ದು ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ

ಮಡಿಕೇರಿ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ರೇಷ್ಮೆ ಮಂಡಳಿ ಅಧ್ಯಕ್ಷ ಟಿ. ಪಿ ರಮೇಶ್ ತನ್ನ ಪಕ್ಕದಲ್ಲಿ ಕೂತಿದ್ದ ಮಹಿಳೆಯ ಕೈ ಎಳೆದು ಅಸಭ್ಯ ವಾಗಿ ನಡೆದುಕೊಂಡಿದ್ದಾರೆ ಈ ಸಂಭಂಧ ವಿಡಿಯೋ ಒಂದು ವೈರಲ್ ಆಗಿದ್ದು ಖಾಸಗಿ ಸುದ್ದಿ ವಾಹಿನಿ ಬಿಟಿವಿ ಈ ಬಗ್ಗೆ ವರದಿ ಕೂಡ ಪ್ರಸಾರ ಮಾಡಿದೆ.

 ಆ ವಿಡಿಯೋ ಇಲ್ಲಿದೆ ನೋಡಿ


No comments