Breaking News

ಯಡಿಯೂರಪ್ಪ ಅವರ ಮೇಲೆ ಎಪ್ ಐ ಆರ್ ಬಂಧನದ ಬೀತಿಯಲ್ಲಿ ಬಿಎಸ್ ವೈ ?


ಬೆಂಗಳೂರು(ಆ. 17): ಡಿಕೆ ಶಿವಕುಮಾರ್ ಮೇಲೆ ಐಟಿ ರೇಡ್ ಆಯ್ತು, ಅಮಿತ್ ಶಾ ಆಗಮಿಸಿ ಸಿದ್ದರಾಮಯ್ಯ ಸರಕಾರವನ್ನು ಅತ್ಯಂತ ಭ್ರಷ್ಟ ಎಂದು ಬಣ್ಣಸಿ ಹೋಗಿದ್ದಾಯ್ತು.. ಈಗ ಪ್ರತ್ಯಸ್ತ್ರ ಬಿಡುವುದು ಕಾಂಗ್ರೆಸ್ ಸರದಿ ಇದ್ದ ಹಾಗಿದೆ. ಬಿಜೆಪಿ ಮುಖಂಡ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಎರಡು ಎಫ್ಐಆರ್'ಗಳು ದಾಖಲಾಗಿವೆ. ಏಳು ವರ್ಷಗಳ ಹಿಂದಿನ ಪ್ರಕರಣಕ್ಕೆ ಈಗ ಮರುಜೀವ ಸಿಕ್ಕಿದೆ. ಡಾ. ಡಿ. ಅಯ್ಯಪ್ಪ ದುರೈ ಎಂಬ ಸಾಮಾಜಿಕ ಹೋರಾಟಗಾರರೊಬ್ಬರು ಬಿಎಸ್'ವೈ ವಿರುದ್ಧ ಅಕ್ರಮ ಡೀನೋಟಿಫಿಕೇಶ್ ಆರೋಪ ಮಾಡಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಲ್ಲಿ ಅವರು ಎಫ್'ಐಆರ್ ದಾಖಲಿಸಿದ್ದಾರೆ.
ಯಡಿಯೂರಪ್ಪ ಸಿಎಂ ಆಗಿದ್ದಾಗ, ಹೆಸರುಘಟ್ಟ-ಯಲಹಂಕ ವ್ಯಾಪ್ತಿಯ 17 ಗ್ರಾಮಗಳಲ್ಲಿ ಒಟ್ಟು 3546 ಎಕರೆ ಜಮೀನನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಸುಮಾರು 19 ಸಾವಿರ ನಿವೇಶನಗಳ ಬೃಹತ್ ಶಿವರಾಮ್ ಕಾರಂತ್ ಬಡಾವಣೆ ನಿರ್ಮಾಣಕ್ಕಾಗಿ ಭೂಸ್ವಾಧೀನವಾಗಿತ್ತು. ಇದರಲ್ಲಿ ಯಡಿಯೂರಪ್ಪನವರು ಸುಮಾರು 257 ಎಕರೆ ಜಮೀನನ್ನು ಡೀನೋಟಿಫೈ ಮಾಡಿಸಿದ್ದರೆನ್ನಲಾಗಿದೆ. ಆದರೆ, ಈ ವಿಚಾರದಲ್ಲಿ ಸುಮಾರು 250 ಎಕರೆಯಷ್ಟು ಜಮೀನಿನ ಡೀನೋಟಿಫಿಕೇಶನ್'ನಲ್ಲಿ ಸರಿಯಾದ ನಿಯಮಗಳನ್ನು ಪಾಲಿಸಲಾಗಿಲ್ಲ. ಅಂದರೆ ಅಕ್ರಮವಾಗಿ ಡೀನೋಟಿಫಿಕೇಶನ್ ಮಾಡಲಾಗಿದೆ ಎಂದು ಅಯ್ಯಪ್ಪ ದುರೈ ಆರೋಪಿಸಿದ್ದಾರೆ.
Source: Suvarna news

No comments