ಗಾಂಧಿ ಹೆಸರಿಗೆ ಮಸಿ ಬಳಿಯಬೇಡಿ ರಾಹುಲ್ ಗೆ ಗಾಂಧಿ ಮೊಮ್ಮಗನ ಬಹಿರಂಗ ಪತ್ರ
ನವ ದೆಹಲಿ :- ದೇಶದಲ್ಲಿ ರಾಜಕೀಯ ಪಕ್ಷಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಬೆನ್ನಲ್ಲೇ ರಾಷ್ಟ್ರಪಿತ ಮಹತ್ಮಾ ಗಾಂಧಿಯವರ ಮೊಮ್ಮಗ ಶ್ರೀ ಕೃಷ್ಣಕುಲಕರ್ಣಿ ಇದೇ ಮೊದಲ ಬಾರಿಗೆ ಇದರ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ .
ಯಸ್ ಇದಕ್ಕೆ ಮೂಲ ಕಾರಣ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿ ಸಭೆಯಲ್ಲಿ ಮಹಾತ್ಮ ಗಾಂಧಿಯವರನ್ನು ಆರ್ ಎಸ್ ಎಸ್ ಕೊಂದಿದೆ ಎಂದು ಅಪಪ್ರಚಾರ ಮಾಡಿ ಜನರ ಹಾದಿ ತಪ್ಪಿಸುತ್ತಾ ಇದ್ದಾರೆ ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ರಾಹುಲ್ ಗಾಂಧಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು .
ಇದೀಗ ಗಾಂಧಿಯವರ ಮೊಮ್ಮಗ ಕುಲಕರ್ಣಿಯವರು ರಾಹುಲ್ ಗೆ ಪತ್ರ ಬರೆದಿದ್ದು ನಿಮ್ಮ ಹೆಸರಿನ ಕೊನೆಯಲ್ಲಿ ಗಾಂಧಿ ಪದ ಹೇಗೆ ಬಂತು ಎಂಬುದನ್ನು ಬಹಿರಂಗ ಪಡಿಸಿ ದೇಶವೆ ಆರಾಧಿಸುವ ಗಾಂಧಿಯವರ ಹೆಸರು ಬಳಸಿ ಅವರಿಗೆ ಅವಮಾನ ಮಾಡಬೇಡಿ ಎಂದು ಮನವಿ ಮಾಡಿಕೊಂಡರು .
ಈ ಹಿಂದೆ ನಡೆದ ಘಟನೆಯಿಂದ ಕುಟುಂಬವು ಮುಂದೆ ಸಾಗಿದೆ ಎಂದು ಹೇಳಿದರು. ಅವರು ಗಂಭೀರ ಭಾಷೆಯನ್ನು ಬಳಸಿ ಈ ವಿಚಾರದ ಕುರಿತಾಗಿ ಸ್ಪಷ್ಟೀಕರಣವನ್ನು ಕೊಟ್ಟರು. ಗಾಂಧಿಯವರ ಹತ್ಯೆಯನ್ನು ಆರ್ ಎಸ್ಎಸ್ ಮಾಡಿಸಿದೆಯೆಂಬ ಹೇಳಿಕೆಯು “ತಮಿಳರು ನಿಮ್ಮ (ರಾಹುಲ್ ಗಾಂಧಿ) ತಂದೆಯನ್ನು ಕೊಂದಿದ್ದಾರೆ” ಎಂಬ ಹೇಳಿಕೆಯಂತೆ ಆಗಿದೆಯೆಂದು ಮಾರ್ಮಿಕವಾದ ಉತ್ತರವನ್ನಿತ್ತರು.
ಇದೀಗ ಈ ಪತ್ರ ಇಡೀ ಕಾಂಗ್ರೆಸ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದು ರಾಹುಲ್ ಗಾಂಧಿಗೆ ಪಕ್ಷದ ಹೊಣೆ ನೀಡಲು ಮುಂದಾದ ಸೋನಿಯಾಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ .
ಒಟ್ಟಾರೆಯಾಗಿ ಮಂದಿನ ಭಾರತದ ಪ್ರಧಾನಿ ಎಂದು ಪ್ರಚಾರ ಪಡೆಯುತ್ತಿರುವ ರಾಹುಲ್ ಗಾಂಧಿಗೆ ಈ ಪತ್ರ ಬರ ಸಿಡಿಲು ಹೋಡೆದ ಹಾಗೆ ಆಗಿದ್ದು ಸುಳ್ಳಲ್ಲ
No comments