Breaking News

ನೀರು ಬೇಕಾ ಪಕ್ಕದ ಮದುವೆ ಹಾಲ್ ಗೆ ಹೋಗಿ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ನೀವೆ ನೋಡಿ

ಬೆಂಗಳೂರು : ಬಡವರ ಪರ ಹಸಿದವರ ಪರ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅಧಿಕಾರದ ಕೊನೆಯಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಮನ ಒಲೈಕೆ ಮಾಡಲು ಮಂದಾಗಿ ಈಗ ಮುಜುಗರಕ್ಕೆ ಇಡಾಗಿದೆ

ಹಸಿವು ಮುಕ್ತ ಕರ್ನಾಟಕಕ್ಕೆ ಇಂದಿರಾ ಕ್ಯಾಂಟೀನ್ ಎಂಬ ಯೋಜನೆ ತಂದು ಅದರಲ್ಲಿ ಬಡವರಿಗೆ ಅನುಕೂಲ ಅಂತ ಪ್ರಚಾರವನ್ನು ಕೊಟ್ಟರು .
ಇಂದಿರಾ ಕ್ಯಾಂಟೀನ್ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಹಸ್ತದಿಂದ ಉದ್ಘಾಟನೆಗೊಂಡಿತು ಉದ್ಘಾಟನೆ ಗೊಂಡ ದಿನದಿಂದ ಕ್ಯಾಂಟೀನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅವ್ಯವಸ್ಥೆ ಮನೆ ಮಾಡಿದೆ .

ಜನರಿಗೆ ಬೇಕಾದಷ್ಟು ಆಹಾರ ನೀಡುವಲ್ಲಿ ಇಂದಿರಾ ಕ್ಯಾಂಟೀನ್ ಸಂಪೂರ್ಣ ವಿಫಲವಾಯಿತು . ಕ್ಯಾಂಟೀನ್ ನಾ ಬೇಡಿಕೆ ಇರುವ ಆಹಾರ ಹೊರಗಡೆಯಿಂದ ತರಿಸಲಾಗುತ್ತಿದ್ದು ಅದರಲ್ಲಿ ಯಾವುದೇ ರುಚಿ ಕೂಡ ಇಲ್ಲ ಹಾಗೂ ಅನ್ನಸಂಬಾರ್ ಅಂತ ನಾಮಪಲಕ ಹಾಕಿದ್ದಾರೆ ಆದ್ರೆ ಟೊಮ್ಯಾಟೊ ಬಾತ್ ಮಾತ್ರ ನೀಡುತ್ತಾ ಇದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು .

ರಾಜ್ಯದಾದ್ಯಂತ ಕ್ಯಾಂಟೀನ್ ತೆರಯುವ ಸರಕಾರದ ಕನಸು ಆರಂಭದಲ್ಲಿ ಕೈ ಕೊಟ್ಟಿದ್ದು ಕಾಂಗ್ರೆಸ್ ನಾಯಕರಿಗೆ ಮುಜುಗರ ಉಂಟುಮಾಡಿದೆ

ಇಂದಿರಾ ಕ್ಯಾಂಟೀನ್ ನ ಅವಸ್ಥೆಯ ಬಗ್ಗೆ ಸ್ಥಳೀಯರು ನಡೆಸಿದ ರಿಯಾಲಿಟಿ ಚಕ್ ನಾ ವಿಡಿಯೋ ಇಲ್ಲಿದೆ

No comments