Breaking News

ಐಟಿ ದಾಳಿ ಹಿನ್ನೆಲೆ ಡಿಕೆಶಿ ಆರೋಗ್ಯದಲ್ಲಿ ಏರುಪೇರು
ಬೆಂಗಳೂರು : ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸತತ ಮೂರು ದಿನಗಳಿಂದ ದಾಖಲೆ ಪರಿಶೀಲನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಂಗಾಲಾಗಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ ಎಂದು ತಿಳಿದು ಬಂದಿದೆ.
ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆಶಿ ಮನೆಗೆ ಮೂವುರ ವೈದ್ಯರು ಭೇಟಿ ನೀಡಿದ್ದಾರೆ. ಡಿಕೆಶಿ ಕುಟುಂಬದ ವೈದ್ಯ ಡಾ.ರಮಣರಾವ್ ಸೇರಿದಂತೆ ಮೂರು ಜನ ಆಗಮಿಸಿದ್ದಾರೆ. ನಿನ್ನೆಯಿಂದ ಬಿಪಿ ಹಾಗೂ ಡಯಾಬಿಟೀಸ್ ಹಿನ್ನೆಲೆಯಲ್ಲಿ ವೈದ್ಯರು ಭೇಟಿ ನೀಡಿದ್ದಾರೆ.
ಡಿಕೆಶಿ ಅವರ ಆರೋಗ್ಯ ತಪಾಸಣೆ ಮುಗಿಸಿದ ವೈದ್ಯರು ವಾಪಸ್ ತೆರಳಿದ್ದಾರೆ.
ಮತ್ತೊಂದಡೆ ಡಿಕೆ ಶಿವಕುಮಾರ್ ಅವರ ಸ್ಥಿತಿಯನ್ನು ನೆನೆದು ತಾಯಿ ಗೌರಮ್ಮ ಕಣ್ಣೀರು ಹಾಕಿದ್ದಾರೆ. 

No comments