Breaking News

ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ರಾಹುಲ್ ರಾಜ್ಯ ಪ್ರವಾಸ ರದ್ದು ?


ಬೆಂಗಳೂರು : ಕಾಂಗ್ರೆಸ್ ನಾಯಕ ಇಂಧನ ಸಚಿವ ಡಿ ಕೆ ಶಿವಕುಮಾರ್ ಮೇಲೆ ನಡೆದ ಐಟಿ ದಾಳಿ ಇದೀಗ ಕಾಂಗ್ರೆಸ್ ಹೈಕಮಾಂಡ್ ಗೆ ಭಾರಿ ಆಗಾತ ಉಂಟುಮಾಡಿದೆ .

ಕರ್ನಾಟಕದ ಪವರ್ ಪುಲ್ ಸಚಿವನ ಮೇಲೆ ದಾಳಿ ನಡೆಯುತ್ತಿದಂತೆ ಕಾಂಗ್ರೆಸ್ ನಾಯಕರು ಕೈ ಕೈ ಹಿಸುಕಿ ಕೊಂಡಿದ್ದು ಪೈಪೊಟಿಗೆ ಬಿದ್ದವರಂತೆ ಇದು ದ್ವೇಷದ ರಾಜಕಾರಣ ಮೋದಿ ಸರಕಾರದ ಈ ರಾಜಕೀಯ ಖಂಡನೀಯ ಎಂದು ಹೇಳಿಕೆಗಳ ಮೇಲೆ ಹೇಳಿಕೆ ನೀಡುತ್ತಾ ಇದ್ದಾರೆ .
ಈ ಹೇಳಿಕೆಗಳಿಗೆ ಸಾರ್ವಜನಿಕ ವಲಯದಿಂದ ಬಾರಿ ಆಕ್ರೋಶ ವ್ಯಕ್ತವಾಗಿದ್ದು ಇವರು ಅಕ್ರಮ ಮಾಡಿಲ್ಲ ಅಂದರೆ ಯಾಕೆ ಹೆದರಬೇಕು ಸರಿಯಾದ ದಾಖಲೆ ಒದಗಿಸಬಹುದಿತ್ತಲ್ಲೆವೆ ಎಂದು ಪ್ರಶ್ನೆ ಮಾಡುತ್ತಾ ಇದ್ದಾರೆ .

ಇತ್ತ ಸಾರ್ವಜನಿಕರ  ಆಕ್ರೋಶ ತೀವ್ರವಾಗುತ್ತಿದಂತೆ ಇದೇ ಬರುವ ಆಗಸ್ಟ್12 ರಂದು ರಾಯಚೂರಿನಲ್ಲಿ ಹಮ್ಮಿಕೊಂಡಿದ ಕಾರ್ಯಕರ್ತರ ಸಮಾವೇಶಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬರುವುದು ಅನುಮಾನ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದು ಬಂದಿವೆ .

ಒಂದು ವೇಳೆ ರಾಹುಲ್ ಗಾಂಧಿ ಈ ಸಮಾವೇಶದಲ್ಲಿ ಭಾಗವಹಿಸಿದರೆ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಗೆ ಇನ್ನಷ್ಟು ಹಿನ್ನಡೆ ಯಾಗುವ ಸಾಧ್ಯತೆ ಇದ್ದು ಹಾಗಾಗಿ ಅವರನ್ನು ಈ ಸಮಾವೇಶದಿಂದ ದೂರ ಇಡಲು ರಾಜ್ಯ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ .



No comments