Breaking News

ನಾವು ಕೆಲಸ ಮಾಡಿದ್ದೇವೆ ಕೂಲಿ ಕೊಡಿ ಇಂಧನ ಸಚಿವ ಡಿಕೆ ಶಿವಕುಮಾರ್


ರಾಯಚೂರು: ಆಗಸ್ಟ್12 ರಾಯಚೂರಿನಲ್ಲಿ ನಡೆದ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ದೇಶಿಸಿದ ಭಾಷಣ ಮಾಡಿದ ಡಿ.ಕೆ.ಶಿವಕುಮಾರ್, ಸತ್ಯಕ್ಕೆ ಯಾವಾಗಲೂ ಜಯವಿದೆ. ನುಡಿದಂತೆ ನಾವು ನಡೆದಿದ್ದೇವೆ, ನಮಗೆ ಜಯವಿದೆ. ನಾವು ಮತದಾರರಲ್ಲಿ ಮತ ಕೇಳುವ ಶಕ್ತಿ ಹೊಂದಿದ್ದೇವೆ. ನಾವು ಕೆಲಸ ಮಾಡಿದ್ದೇವೆ ಕೂಲಿ ಕೊಡಿ. ಐದು ವರ್ಷ ಬಿಜೆಪಿ ರಾಜ್ಯದಲ್ಲಿ ಏನನ್ನೂ ಮಾಡಲಿಲ್ಲ. ಮೋಡ, ಗ್ರಹಣ, ಕಷ್ಟಗಳು ಬರುತ್ತವೆ ಅದಕ್ಕೆಲ್ಲಾ ಚಿಂತೆ ಮಾಡಬಾರದು. ಕಾಂಗ್ರೆಸ್ ಪಕ್ಷ ರಾಜ್ಯದ ಜನರನ್ನ ಕಾಯುತ್ತದೆ. ರಾಹುಲ್ ಗಾಂಧಿಯನ್ನ ಮುಂದಿನ ಪ್ರಧಾನಿ ಮಾಡಲು ಎಲ್ಲರೂ ಪಣತೊಡಬೇಕಿದೆ ಅಂದ್ರು.


ಸಮಾವೇಶದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ರಾಯಚೂರಿಗೆ ಬಂದಿಳಿದ ನಂತರ ಸಿಎಂ ಹಾಗೂ ಪರಮೇಶ್ವರ್ ಸೇರಿದಂತೆ ನಾಯಕರು ಸ್ವಾಗತ ಮಾಡಿದ್ರು. ಜಿಂದಾಲ್ ಏರ್‍ಪೋರ್ಟ್‍ನಿಂದ ರಾಹುಲ್ ಗಾಂಧಿ ಜೊತೆ ಉಸ್ತುವಾರಿ ವೇಣುಗೋಪಾಲ್ ಕೂಡಾ ರಾಯಚೂರಿಗೆ ತೆರಳಿದ್ರು. ಈ ನಡುವೆ ಜಿಂದಾಲ್ ಏರ್‍ಪೋರ್ಟ್‍ಗೆ ರಾಹುಲ್ ಗಾಂಧಿ ಬಂದಿಳಿದಾಗ ಸಚಿವ ಸಂತೋಷ್ ಲಾಡ್, ರಾಹುಲ್ ಗಾಂಧಿ ಕಾಲಿಗೆ ಬಿದ್ದು ನಮಸ್ಕರಿಸಿದ್ರು. ಇದು ಕಾಂಗ್ರೆಸ್‍ನ ಕೆಲ ನಾಯಕರು ಅಚ್ಚರಿ ಪಡುವಂತೆ ಮಾಡಿತು.

No comments