Breaking News

ಕಲ್ಲಡ್ಕ ಪ್ರಭಾಕರ್ ಭಟ್ ಬಂಧಿಸುವ ಗಂಡಸು ಕಾಂಗ್ರೆಸ್ ನಲ್ಲಿ ಇಲ್ಲವೇ: ದೇವೆಗೌಡವಿಜಯಪುರ : ರಾಜ್ಯದಲ್ಲಿ ಬಾರಿ ಸಂಚಲನ ಮೂಡಿಸಿದ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಅನುದಾನ ಕಡಿತದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ  ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡ ಕಲ್ಲಡ್ಕ ಪ್ರಭಾರಕ್ ಭಟ್ ಕೋಮುವಾದಿ ಕರಾವಳಿಯಲ್ಲಿ ಅಶಾಂತಿ ಉಂಟುಮಾಡುವಲ್ಲಿ ಭಟ್ ಪಾತ್ರ ಪ್ರಮುಖವಾಗಿದೆ ಎಂದು ಕಿಡಿಕಾರಿದರು .

ರಾಜ್ಯ ಸರಕಾರ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಅನುದಾನ ತಡೆ ಹಿಡಿದಿದ್ದು ಉತ್ತಮ ಕೆಲಸ ಕೊಲ್ಲೂರು ದೇವಸ್ಥಾನದಿಂದ ಅಕ್ರಮವಾಗಿ ನೆರವು ಪಡೆದು ಸರಕಾರದಿಂದ ಅನುದಾನ ಪಡೆದು ಮೋಸ ಮಾಡುವವರಿಗೆ ಹೀಗೆ ಮಾಡಬೇಕು ಎಂದು ರಾಜ್ಯ ಸರಕಾರದ ಪರ ಬ್ಯಾಟ್ ಬಿಸಿದರು.

 ಇಷ್ಟೆಲ್ಲಾ ಆದರೂ ರಾಜ್ಯ ಸರಕಾರ ಕಲ್ಲಡ್ಕ ಪ್ರಭಾಕರ್ ಭಟ್ ಬಂಧನ ಮಾಡದೆ ಇರುವುದು ವಿಪರ್ಯಾಸ ಕರಾವಳಿಯಲ್ಲಿ ಕೊಮುಗಲಭೆ ಕುಮ್ಮಕು ನೀಡುವ ಭಟ್ ರನ್ನು ಬಂಧಿಸುವ ಗಂಡಸು ಕಾಂಗ್ರೆಸ್ ನಲ್ಲಿ ಇಲ್ಲವೇ ಎಂದು ರಾಜ್ಯ ಸರಕಾರಕ್ಕೆ ಪ್ರಶ್ನೆ ಮಾಡಿದರು.

No comments