Breaking News

ಹಜ್‌ ಯಾತ್ರೆ ಹೆಸರಲ್ಲಿ 4 ಲಕ್ಷ ದೋಚಿದ ಕಿರಾತಕ


ಹುಬ್ಬಳ್ಳಿ: ಹಜ್ ಯಾತ್ರೆ ಹೆಸರಲ್ಲಿ ಕೋಟ್ಯಾಂತರ ರೂ. ಪಂಗನಾಮ ಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಅನಂದ್‌ನಗರದ ನಿವಾಸಿ ಹಸ್ಮತ್ ಖಾದ್ರಿ ಎನ್ನುವಾತ ಪವಿತ್ರ ಹಜ್ ಯಾತ್ರೆಗೆ ಕಳಿಸುವ ಕೊಡುವುದಾಗಿ ನಂಬಿಸಿ ವಂಚನೆಗೈದ ಆರೋಪಿ

ರಾಜ್ಯಾದ್ಯಂತ ಸುಮಾರು 58 ಜನರಿಂದ 1.40 ಕೋಟಿ ರೂ.ಗೂ ಅಧಿಕ ಹಣ ವಸೂಲಿ ಮಾಡಿ ನಾಪತ್ತೆಯಾಗಿದ್ದಾನೆ. ಆ. 23ರಂದು ಹಜ್ ಯಾತ್ರೆಗೆ ಕಳಿಸುವುದಾಗಿ ಹಸ್ಮತ್ ಖಾದ್ರಿ ಸುಮಾರು 58 ಜನರಿಂದ ಪಾಸ್‌ಪೋರ್ಟ್ ಹಾಗೂ ದಾಖಲಾತಿ ಸೇರಿದಂತೆ ತಲಾ 3ರಿಂದ 4 ಲಕ್ಷ ರೂ. ಹಣ ಪಡೆದಿದ್ದಾರೆ.
ಆದರೆ ಹಣ ಎಲ್ಲ ಸೇರಿದ ಮೇಲೆ ಕುಟುಂಬ ಸಮೇತ ಪರಾರಿಯಾಗಿದ್ದಾನೆ.

ಕಂಗಾಲಾದ ಯಾತ್ರೆಕರು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಗೆ ಬಂದ್ ಆತನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇನ್ನೂ ಕಳೆದ ಐದು ವರ್ಷಗಳಿಂದಲೂ ಅಸ್ಮತ್ ಖಾದ್ರಿ ಹಜ್ ಯಾತ್ರೆಗೆ ಜನರನ್ನು ಕಳಿಸಿ ಕೊಡುತ್ತಿದ್ದನು. ಆದರೆ ಕಳೆದ ವರ್ಷವೂ 15 ಜನರಿಗೆ ಇದೇ ರೀತಿಯಲ್ಲಿ ಮೋಸ ಮಾಡಿದ್ದನಂತೆ. ಆದರೆ,

ಕಳೆದ ವರ್ಷದ 15 ಜನರನ್ನು ಈ ವರ್ಷ ಕಳಿಸಿ ಕೊಡುವುದಾಗಿ ಹೇಳಿ ಮೋಸ ಮಾಡಿದ್ದಾನೆ.ಈ ಬಗ್ಗೆ  ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




loading...

No comments