Breaking News

ಕಾಂಗ್ರೆಸ್ ಗೆ ಗುಡ್ ಬೈ ಬಿಜೆಪಿ ಜೊತೆ ಮೈತ್ರಿಗೆ ಮುಂದಾದ YSR ಕಾಂಗ್ರೆಸ್ ?
ಹೈದರಾಬಾದ್ : ರಾಜಕೀಯದಲ್ಲಿ ಇದೀಗ ಮೈತ್ರಿಯ ಕಾಲ ಮೊನ್ನೆ ಯಷ್ಟೆ ನಿತೀಶ್ ಕುಮಾರ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ರಾಜಕೀಯದಲ್ಲಿ ಸಂಚಲನ ಮೂಡಿಸಿದರು ತದ ನಂತರ ತಮಿಳುನಾಡಿನ ಎಐಡಿಎಂಕೆ ಬಿಜೆಪಿ ಜೊತೆ ಮೈತ್ರಿಗೆ ಮಾತುಕತೆ ನಡೆಯುತ್ತಿರುವ ಬೆನ್ನಲ್ಲೇ ಬಿಜೆಪಿಗೆ ಮತ್ತೊಂದು ಸಿಹಿ ಸುದ್ದಿ ಲಭಿಸಿದೆ ಅದು ಏನೆಂದರೆ ಹೈದರಾಬಾದ್ ನಾ  ವೈಎಸ್ ಆರ್ ಕಾಂಗ್ರೆಸ್ ಇದೀಗ ಬಿಜೆಪಿ ಜೊತೆ ಮೈತ್ರಿಗೆ ಮುಂದಾಗಿದೆ.

ವೈಎಸ್ ಆರ್ ಕಾಂಗ್ರೆಸ್ ಅಧ್ಯಕ್ಷ ಜಗಮೋಹನ್ ಅವರು ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದು ಇತಿಹಾಸದ ಜ್ಞಾನ ಇಲ್ಲದೆ ಬಾಯಿಗೆ ಬಂದಾಗೆ ಮಾತಾಡುತ್ತಾ ಇದ್ದಾರೆ ಹಾಗೂ ದೇಶದ ಜನರಲ್ಲಿ ಗೊಂದಲ ವಾತಾವರಣ ಸೃಷ್ಟಿ ಮಾಡುತ್ತಾ ಇದ್ದು ಜನರನ್ನು ತಪ್ಪು ದಾರಿಗೆ ತಳುತ್ತಿದ್ದಾರೆ ಹಾಗಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ .

ಸದ್ಯ ಕಾಂಗ್ರೆಸ್ ತನ್ನ ಎಲ್ಲ ಅಂಗ ಪಕ್ಷಗಳನ್ನು ಕಳೆದುಕೊಳ್ಳುವ ಬಿತ್ತಿಯಲ್ಲಿ ಇದ್ದರು ರಾಹುಲ್ ಗಾಂಧಿ ಯನ್ನು ಪಕ್ಷದ ಅಧ್ಯಕ್ಷನಾಗಿ ಮಾಡಲು ಹೊರಟಿರುವುದು ಇದೆಲ್ಲ ಬದಲಾವಣೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. 

No comments