ಭಾರತೀಯ ಮುಸ್ಲಿಮರ ಪೂರ್ವಜರು ಹಿಂದುಗಳು ನಾರಾಯಣ ಯಾದವ್
ನವದೆಹಲಿ: ಸೋಮವಾರ ಸಂಸತ್ತಿನಲ್ಲಿ ನಡೆದ ಇತ್ತೀಚೆಗಿನ ದಾಳಿಗಳ ಕುರಿತು ಪ್ರತಿಕ್ರಯಿಸಿದ ಭಾರತೀಯ ಜನತಾ ಪಕ್ಷದ ಸಂಸದ ಹುಕುಂದೇವ್ ನಾರಾಯಣ ಯಾದವ್ ಈ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ಅವರ ಈ ಹೇಳಿಕೆಯು ಐತಿಹಾಸಿಕ ಪ್ರಾಮುಖ್ಯತೆ ಹೊಂದಿದ್ದು ದೀನ ದಯಾಳ ಉಪಾಧ್ಯಾಯರು ಈ ಮಾತನ್ನು ಆಡಿದ್ದರು. “ಮುಸಲ್ಮಾನರ ಜನನ ಪೂರ್ವಜರು ಹಿಂದೂಗಳಾಗಿದ್ದರು, ಹಿಂದೂಗಳ ದೇವರು, ಅವರ ದೇವರುಗಳಾಗಿದ್ದರು ಎಂದು ತಿಳಿಯಬೇಕು” ಎಂಬುದು ಅವರ ಚರ್ಚಾಸ್ಪದ ಹೇಳಿಕೆ. ಯಾದವ್ ಅವರು ಈ ಹೇಳಿಕೆಯ ನೆನಪನ್ನು ಮರುಕಳಿಸಿದ್ದಾರೆ.
ಕಾಂಗ್ರೆಸ್ ವಿರುದ್ದ ಮಾತನಾಡಿದ ಯಾದವ್‍ರವರು ಈ ದಾಳಿಗಳಿಗೆ ಕೇಂದ್ರ ಸರಕಾರವನ್ನು ಹೊಣೆಮಾಡುವುದು ಸರಿಯಿಲ್ಲ ಎಂದು ಕಿಡಿಕಾರಿದರು. ಈ ವೇಳೆ ಎಡಪಕ್ಷಗಳ ಆಳ್ವಿಕೆಯಲ್ಲಿರುವ ಕೇರಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರ ಮೇಲಿನ ದಾಳಿಯ ವಿಷಯವನ್ನು ಪ್ರಸ್ತಾಪಿಸಿದರು. ಕಾಂಗ್ರೆಸ್ ಮೇಲೆ ಮಾತಿನ ದಾಳಿಯನ್ನು ಮುಂದುವರಿಸುತ್ತಾ, ನಿಮ್ಮ ಮುಂದೆ ತಲೆಬಾಗುವ ಬದಲು ನಾನು ಸಾಯುತ್ತೇನೆ ಎಂದು ಹೇಳಿದರು.
ತಮ್ಮ ಮಾತನ್ನು ಮುಂದುವರಿಸುತ್ತಾ ಹಿಂದು ಹಾಗೂ ಮುಸಲ್ಮಾನರು ಪರಸ್ಪರ ಗೌರವವೀಯಬೇಕು ಎಂದು ಹೇಳಿಕೆಯ ದಗೆಯನ್ನು ತಗ್ಗಿಸಲು ಪ್ರಯತ್ನಿಸಿದರು.
Source : online
No comments