ಗಡಿಯಿಂದ ಚೀನಿ ಸೈನಿಕರನ್ನು ಓಡಿಸಿದ ಭಾರತೀಯ ಯೋಧರು
ಚಮೇಲಿ(ಉತ್ತರಾಖಂಡ್): ಯಾವಾಗಲೂ ಗಡಿ ವಿವಾದಕ್ಕೆ ಸಂಬಂಧಿಸಿದಿಂತೆ ಕ್ಯಾತೆ ತೆಗೆಯುವ ಚೀನಾ ಇವಾಗ ಮತ್ತೊಂದು ಕಿರಿಕ್ ಮಾಡಿದೆ.
ಉತ್ತರಾಖಂಡ್‌ದ ಚಮೇಲಿ ಜಿಲ್ಲೆಯ ಗಡಿ ಪ್ರದೇಶ ಬಾರಾಹೋತಿಯ ಭಾರತದ ಗಡಿ ಪ್ರವೇಶಿಸಿದ ಚೀನಾ ಸೇನೆ ಸುಮಾರು 1 ಕಿ.ಮೀಟರ್‌ನಷ್ಟು ಗಡಿಯೊಳಗೆ ಪ್ರವೇಶಿಸಿತ್ತು. ಸದ್ಯ ಭಾರತೀಯ ಯೋಧರು ಸತತ 2ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಚೀನಾ ಸೇನೆ ಹಿಮ್ಮೆಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜುಲೈ 26ರಂದು ಚೀನಾ ಯೋಧರು ಭಾರತದ ಗಡಿಯೊಳಗೆ ನುಗ್ಗಿದ್ದರು. ಕಳೆದ ಕೆಲ ತಿಂಗಳಿಂದ ಆಸ್ಸೋಂನ ಡೋಕ್ಲೊಮಾ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ-ಚೀನಾ ನಡುವೆ ವೈಮನಸ್ಸು ಉಂಟಾಗಿದೆ.
Source: online
No comments