Breaking News

ಚೈನಾ ಮೊಬೈಲ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ಭಾರತದಲ್ಲಿ ಚೈನಾ ಮೊಬೈಲ್ ಬ್ಯಾನ್ ?




ನವದೆಹಲಿ: ಭಾರತ ಮತ್ತು ಚೀನಾ ನಡುವೆ ಯುದ್ದದ ಸನ್ನಿವೇಶ ಏರ್ಪಟ್ಟಿರುವ ಬೆನ್ನಲ್ಲೇ ಚೀನಾ ಮೋಬೈಲ್`ಗಳಿಂದ ಭಾರತಕ್ಕೆ ಅಪಾಯದ ಸೂಚನೆ ಸಿಕ್ಕಿದೆ. ಹೀಗಾಗಿ, ಚೀನಾ ಮೊಬೈಲ್ ಕಂಪನಿಗಳಿಗೆ ಕೇಂದ್ರ ಸರ್ಕಾರ ನೋಟಿಸ್ ಕೊಟ್ಟಿದೆ.
ವಿವೋ, ಒಪ್ಪೋ, ಷಿಯಾಮಿ, ಜಿಯೋನಿ ಕಂಪನಿಗಳಿಗೆ ನೋಟಿಸ್ ನೀಡಿರುವ ಕೇಂದ್ರ ಸರ್ಕಾರ, ಹ್ಯಾಕಿಂಗ್ ಭದ್ರತಾ ಫೀಚರ್`ಗಳ ಬಗ್ಗೆ ವಿವರಣೆ ಕೇಳಿದೆ. ಚೀನಾದಲ್ಲಿ ತಯಾರಾದ ಈ ಮೋಬೈಲ್`ಗಳು ಭಾರತೀಯರ ವೈಯಕ್ತಿಕ ಮಾಹಿತಿ ಮತ್ತು ಸಂದೇಶಗಳನ್ನ ಕದಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.

ಚೀನಾಯೇತರ ಕಂಪನಿಗಳಾದ ಆಪಲ್, ಸ್ಯಾಮ್ ಸಂಗ್, ಭಾತರೀಯ ಕಂಪನಿ ಮೈಕ್ರೋ ಮ್ಯಾಕ್ಸ್ ಸೇರಿ 21 ಕಂಪನಿಗಳಿಗೆ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯದಿಂದ ನೊಟಿಸ್ ನೀಡಲಾಗಿದೆ.ಈ ಕಂಪನಿಗಳಿಗೆ ಆಗಸ್ಟ್ 28ರವರೆಗೆ ಕೇಂದ್ರ ಸರ್ಕಾರ ಕಾಲಾವಕಾಶ ನೀಡಲಾಗಿದ್ದು, ಅಷ್ಟರೊಳಗೆ ಭದ್ರತಾ ನಿಯಮಗಳ ಅನುಸರಣೆಯ ಮಾಹಿತಿ ಸಲ್ಲಿಸುವಂತೆ ತಿಳಿಸಲಾಗಿದೆ. ಒಂದೊಮ್ಮೆ ಭದ್ರತಾ ನಿಯಮ ಅನುಸರಣೆ ಉಲ್ಲಂಘನೆ ಸಾಬೀತಾದರೆ ಈ ಕಂಪನಿಗಳಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ ಹಾಗೂ ಚೀನಾ ಮೊಬೈಲ್ ಬ್ಯಾನ್ ಮಾಡುವ ಕುರಿತು ಮಾತುಕತೆ ನಡೆಯುವ ಸಾದ್ಯತೆ ಇದೇ .

Source : online

No comments