Breaking News

ದೋಕಲಮ್‌ ವಿವಾದ ಚೀನಾಕ್ಕೆ ಸಡ್ಡು ಬಡಿದು ಭಾರತದ ಬೆಂಬಲಕ್ಕೆ ನಿಂತ ಜಪಾನ್‌




ನವದೆಹಲಿ : ಸಿಕ್ಕಿಂನ ದೋಕಲಮ್‌ ಗಡಿಪ್ರದೇಶದಲ್ಲಿ ಭಾರತ – ಚೀನಾ ಸೈನಿಕರ ಮುಖಾಮುಖಿಯಾಗಿದ್ದಾರೆ. ಇದರ ಬೆನ್ನಲ್ಲೇ ಭಾರತಕ್ಕೆ ಬೆಂಬಲ ಸೂಚಿಸಿರುವ ಜಪಾನ್‌ ಚೀನಾ ವಿರುದ್ಧ ಗುಡುಗಿದೆ.ಸ್ಥಳದಲ್ಲಿ ಈಗಿರುವ ವಾಸ್ತವಿಕ ಸ್ಥಿತಿಯನ್ನು ಬಲಪ್ರಯೋಗದಿಂದ ಬದಲಿಸುವ ಯಾವುದೇ ಪ್ರಯತ್ನ ನಡೆಯಕೂಡದು ಎಂದು  ಹೇಳಿದೆ.


ಭೂತಾನ್‌ನ ಭಾಗವಾಗಿರುವ ಡೋಕ್ಲಾಂ ಪ್ರಸ್ಥಭೂಮಿಯಲ್ಲಿ ರಸ್ತೆ ನಿರ್ಮಿಸುವ ಯತ್ನದ ಮೂಲಕ ಭಾರತ ಮತ್ತು ಭೂತಾನ್ ಜತೆ ಮಾಡಿಕೊಂಡ ಒಪ್ಪಂದವನ್ನು ಚೀನಾ ಉಲ್ಲಂಘಿಸಿದೆ ಎಂಬ ಭಾರತದ ವಾದಕ್ಕೆ ಸಮರ್ಥನೆಯಾಗಿ ಜಪಾನ್ ಈ ಹೇಳಿಕೆ ನೀಡಿದೆ.

ಡೋಕ್ಲಾಂ ವಿಷಯದಲ್ಲಿ ಭಾರತ-ಚೀನಾ ಸೇನೆಗಳು ಮುಖಾಮುಖಿಯಾಗಿ ನಿಂತು ಎರಡು ತಿಂಗಳಾಗುತ್ತಿರುವ ಈ ಸಂದರ್ಭದಲ್ಲಿ ಜಪಾನಿನ ರಾಯಭಾರಿ ಕೆನ್‌ಜಿ ಹಿರಾಮಟ್ಸು ಈ ಹೇಳಿಕೆ ನೀಡಿದ್ದಾರೆ.

No comments