Breaking News

ಡಿಕೆಶಿ ಮೇಲೆ ಬಿಜೆಪಿ ಪ್ರಯೋಗಿಸಿದ ಐಟಿ ದಾಳಿ ಬೆನ್ನಲ್ಲೇ ಕಲ್ಲಡ್ಕ ಪ್ರಭಾಕರ್ ಭಟ್ ಒಡೆತನದ ಶಾಲೆಗಳಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ!




ಮಂಗಳೂರು: ಬಿಜೆಪಿ ಪ್ರಯೋಗಿಸಿದ ಐಟಿ ದಾಳಿಯ ಬೆನ್ನಲ್ಲೇ ಕಾಂಗ್ರೆಸ್ ಆಡಳಿತದ ರಾಜ್ಯ ಸರ್ಕಾರ
RSS ಮುಖಂಡ ಕಲ್ಲಡ್ಕ ಪ್ರಭಾಕರ್​ ಭಟ್​ ಒಡೆತನದ ಶಾಲೆಗಳಿಗೆ  ಶಾಕ್ ಕೊಟ್ಟಿದೆ. ಪ್ರಭಾಕರ್ ಭಟ್ ಒಡೆತನದ ಶಾಲೆಗಳಾದ ಶ್ರೀರಾಮಕೇಂದ್ರ, ಶ್ರೀದೇವಿ ವಿದ್ಯಾಕೇಂದ್ರದ ದತ್ತು ಆದೇಶವನ್ನು ಸರ್ಕಾರ ರದ್ದುಗೊಳಿಸಿದೆ.
ಈ ವಿದ್ಯಾಸಂಸ್ಥೆಗಳನ್ನು ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ವತಿಯಿಂದ ಕಲ್ಲಡ್ಕ ಪ್ರಭಾಕರ್ ಭಟ್ ದತ್ತು ಪಡೆದಿದ್ದರು. ಆದರೀಗ ಹಿಂದೂ ಧಾರ್ಮಿಕ ದತ್ತಿ ಅಧಿನಿಯಮದಂತೆ ಖಾಸಗಿ ಶಾಲೆ ದತ್ತು ಪಡೆಯಲು ಅಧಿಕಾರವಿಲ್ಲ. ನಿಯಮದ ಪ್ರಕಾರ ದೇವಸ್ಥಾನಕ್ಕೆ ನಷ್ಟ ಆಗುತ್ತೆ ಅನ್ನೋ ಕಾರಣ ನೀಡಿರುವ ರಾಜ್ಯ ಸರ್ಕಾರ ಈ ದತ್ತು ಆದೇಶವನ್ನು ರದ್ದುಗೊಳಿಸಿದೆ.
ಯಡಿಯೂರಪ್ಪ ಅವಧಿಯಲ್ಲಿ ದೇವಸ್ಥಾನ ಆಡಳಿತ ಮಂಡಳಿಯಿಂದಲೇ ಶಿಕ್ಷಣ ಸಂಸ್ಥೆಗಳನ್ನು ಕಲ್ಲಡ್ಕ ಪ್ರಭಾಕರ್ ಭಟ್ ಅವರು ದತ್ತು ಪಡೆದಿದ್ದರು.

No comments