ಬಿಜೆಪಿ ಸಂಸದರಿಗೆ ಖಡಕ್ ಎಚ್ಚರಿಕೆ ಕೊಟ್ಟ ಪ್ರಧಾನಿ ಮೋದಿ ಯಾಕೆ ಗೊತ್ತಾ ?
ನವದೆಹಲಿ: ‘ಸಂಸತ್ನಲ್ಲಿ ಗೈರಾಗುವ ಬಿಜೆಪಿ ಸಂಸದರ ಜತೆಗೆ ಈಗೇನೂ ಮಾತನಾಡಲ್ಲ. ಆದರೆ, 2019ರಲ್ಲಿ ಖಚಿತವಾಗಿ ಅವರನ್ನು ನೋಡಿಕೊಳ್ಳುವೆ‘ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂಸದೀಯ ಸಮಿತಿ ಸಭೆಯಲ್ಲಿ ಎಚ್ಚರಿಸಿದ್ದಾರೆ.ಸಂಸತ್ನಲ್ಲಿ ಹಾಜರಿ ಕಾಯ್ದುಕೊಳ್ಳಲು ಪಕ್ಷದ ಸಚೇತಕರು ಪದೇಪದೆ ವಿಪ್ ಜಾರಿಗೊಳಿಸುವ ಸನ್ನಿವೇಶ ಸೃಷ್ಟಿಯಾಗುತ್ತಿರುವುದೇಕೆ? ಮೂರು ಸಾಲಿನ ವಿಪ್ ಯಾಕೆ ಬೇಕು? ಹಾಜರಾತಿಗಾಗಿ ಮಾತ್ರ ಯಾಕೆ ಬರಬೇಕು? ಯಾರಿಗೆ ಏನನ್ನಿಸುತ್ತದೋ ಅದನ್ನು ಮಾಡಿ. ಆದರೆ, 2019ರ ಚುನಾವಣೆ ಸಂದರ್ಭದಲ್ಲಿ ಈ ರೀತಿ ನಡೆದುಕೊಂಡ ಸಂಸದರನ್ನು ನೋಡಿಕೊಳ್ಳುವೆ ಎಂದು ಮೋದಿ ಎಚ್ಚರಿಸಿದರು.
ಇತ್ತೀಚೆಗೆ ನಡೆದ ಉಪರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲೂ 14 ಸಂಸದರು ಗೈರಾಗಿದ್ದರು. ಇವರ ಪೈಕಿ ಬಿಜೆಪಿ, ಕಾಂಗ್ರೆಸ್, ಐಯುಎಂಎಲ್ನ ತಲಾ ಇಬ್ಬರು, ಟಿಎಂಸಿಯ ನಾಲ್ಕು, ಎನ್ಸಿಪಿ, ಪಿಎಂಕೆಯ ತಲಾ ಒಬ್ಬರು ಮತ್ತು ಇಬ್ಬರು ಪಕ್ಷೇತರ ಸಂಸದರು ಸೇರಿದ್ದಾರೆ.
ರಾಜ್ಯಸಭೆಯಲ್ಲಿ ಜು.31ರಂದು ಕಲಾಪ ನಡೆದಾಗ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆಗೆ ಅನುಮೋದನೆ ಪಡೆದುಕೊಳ್ಳುವಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿತ್ತು. ಸಂಸದರು ಗೈರಾದ್ದರಿಂದ ವಿಪಕ್ಷ ಸಂಸದರ ಅಪೇಕ್ಷೆಯಂತೆ ಮಸೂದೆಯನ್ನು ಅಧ್ಯಯನಕ್ಕೆ ಸಮಿತಿಗೆ ಒಪ್ಪಿಸಬೇಕಾಗಿ ಬಂತು
Source: online
No comments