Breaking News

ಆಗಸ್ಟ್15 ರಂದು ಮದರಸಗಳಲ್ಲಿ ಧ್ವಜಾರೋಹಣ ಕಡ್ಡಾಯ ಮುಸ್ಲಿಮರ ಮುಖಂಡರ ತೀವ್ರ ವಿರೋಧ

ಉತ್ತರಪ್ರದೇಶ: ಈ ಬಾರಿ ನಡೆಯಲಿರುವ ಸ್ವತಂತ್ರ ದಿನಾಚರಣೆಯನ್ನು ಮದರಸಗಳಲ್ಲಿ ಹೇಗೆ ಆಚರಿಸುತ್ತಾರೆ ಎನ್ನುವುದನ್ನು ವಿಡಿಯೋಗ್ರಾಫ್ ಮಾಡುವಂತೆ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶಿಸಿದೆ.

ಸ್ವಾತಂತ್ರ ಹೋರಾಟಕ್ಕೆ ಮದರಸಗಳು ಹಾಗೂ ಅದರ ಶಿಕ್ಷಕರು ಮೌಲ್ಯಯುತವಾದ ಕೊಡುಗೆ ನೀಡಿದ್ದಾರೆ. ಆದರೂ ನಮ್ಮನ್ನು ಸಂಶಯಾಸ್ಪದವಾಗಿ ನೋಡುತ್ತಿರುವುದು ದುರಾದೃಷ್ಟಕರವಾದ ವಿಚಾರ ಎಂದು ಮದರಸದ ಮುಖ್ಯಸ್ಥರು ಹೇಳಿದ್ದಾರೆ.


ಸ್ವತಂತ್ರ ದಿನಾಚರಣೆ ದಿನ ಬೆಳಿಗ್ಗೆ 8 ಗಂಟೆಗೆ  ದ್ವಜಾರೋಹಣ ಮಾಡಲಾಗುತ್ತದೆ. 8.10 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಹುತಾತ್ಮರಿಗೆ ನಮನ ಸಲ್ಲಿಸಲಾಗುತ್ತದೆ. ಈ ವಿಡಿಯೋವನ್ನು ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿಗಳಿಗೆ ಕಳುಹಿಸಿಕೊಡಬೇಕು ಎಂದು ಆದೇಶಿಸಲಾಗಿದೆ.

No comments