ಕಾಂಗ್ರೆಸ್ ಖಜಾನೆ ಮೇಲೆ ಐಟಿ ದಾಳಿ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಐಟಿ ಕಛೇರಿ ಪುಡಿ ಪುಡಿ
ಮಂಗಳೂರು : ಕಾಂಗ್ರೆಸ್ ಮುಖಂಡ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಮನೆಯ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಇಲ್ಲದ ಒಟ್ಟಾರೆ 7.5 ಕೋಟಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ . ಐಟಿ ದಾಳಿ ನಡೆಯುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಮೋದಿ ಸರಕಾರದ ವಿರುದ್ಧ ಕಿಡಿಕಾರಿದರು.
ಈ ದಾಳಿ ಸಂಬಂಧ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದ್ದು ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು .
ಇತ್ತ ದಾಳಿ ಸಂಬಂಧ ದೃಶ್ಯ ಮಾದ್ಯಮದಲ್ಲಿ ನಾನಾ ಬಗೆಯ ಸುದ್ದಿಗಳು ಪ್ರಸಾರವಾಗುತ್ತಿದ್ದಂತೆ ಮಂಗಳೂರು ಯುವ ಕಾಂಗ್ರೆಸ್ ಕಾರ್ಯಕರ್ತರು ರೊಚ್ಚಿಗೆದ್ದು ರಸ್ತೆ ತಡೆ ನಡೆಸಿ ಈ ದಾಳಿಯ ವಿರುದ್ಧ ದಿಕ್ಕಾರ ಕೂಗಿದ್ದರು ಹಾಗೂ ಮಂಗಳೂರು ಐಟಿ ಕಛೇರಿಯ ಮೇಲೆ ಗೂಂಡಾ ವರ್ತನೆ ತೋರಿದ ಕಾರ್ಯಕರ್ತರು ಐಟಿ ಕಛೇರಿಯನ್ನು ಧ್ವಂಸಗೊಳಿಸಿದರು.
ಈ ಸಂಬಂಧ ಹಲವರನ್ನು ಬಂಧಿಸಿ ಪ್ರಕರಣ ದಾಖಲಿಸಿಲಾಗಿದೆ ಎಂದು ವರದಿಯಾಗಿದೆ .
ಕಾಂಗ್ರೆಸ್ ಕಾರ್ಯಕರ್ತರ ಗುಂಡಾ ವರ್ತನೆಗೆ ಇದೀಗ ಇಡೀ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಕ್ರತ್ಯ ಎಸಗಿದವರ ಮೇಲೆ ಗುಂಡಾ ಕಾಯ್ದೆ ಹಾಕುವಂತೆ ಸಾರ್ವಜನಿಕ ಒತ್ತಾಯಿಸುತ್ತಿದ್ದಾರೆ ಒಟ್ಟಾರೆ ಈ ದಾಳಿ ಇಡೀ ಕಾಂಗ್ರೆಸ್ ನ ನಾಯಕರಲ್ಲಿ ಭಯ ಹುಟ್ಟಿಸಿದ್ದಂತು ಸುಳ್ಳಲ್ಲ
No comments