Breaking News

ಮುಂಬೈನಲ್ಲಿ Ats ಕಾರ್ಯಚರಣೆ ಮೂವರು ಉಗ್ರರ ಬಂಧನ, ಅಪಾರ ಪ್ರಮಾಣದ ಸ್ಫೋಟಕ ವಶ




ಮುಂಬೈ: ಎಟಿಎಸ್ ನಡೆಸಿದ  ಕಾರ್ಯಚರಣೆಯಲ್ಲಿ ಮೂವರು  ಉಗ್ರರನ್ನು ಬಂಧಿಸಿದ್ದು, ಬಂಧಿತರಿಂದ ಬರೊಬ್ಬರಿ 15 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮುಂಬೈನ ಥಾಣೆಯ ಕೌಸಾ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಕುರಿತು ಮಾಹಿತಿ ಪಡೆದಿದ್ದ ಎಟಿಎಸ್ ಅಧಿಕಾರಿಗಳು, ಇಂದು ಬೆಳಗ್ಗೆ ದಾಳಿ ಮಾಡಿದ್ದಾರೆ. ಈ ವೇಳೆ ಮೂವರು  ಉಗ್ರರರನ್ನು ಬಂಧಿಸಿದ್ದು, ಬಂಧಿತರಿಂದ 9 ಡಿಟೋನೇಟರ್ ಗಳು ಹಾಗೂ ಬರೊಬ್ಬರಿ 15 ಕೆಜಿ ತೂಕದ ಅಮೋನಿಯಂ ನೈಟ್ರೇಟ್ ಸ್ಫೋಟರವನ್ನು ವಶಪಡಿಸಿಕೊಂಡಿದ್ದಾರೆ. ಈಗ್ಗೆ ಕೆಲ ದಿನಗಳ ಹಿಂದಷ್ಟೇ ಮುಂಬೈ ಎಟಿಎಸ್ ಗೆ ರಾಜ್ಯದ ಹಲವೆಡೆ ಬಾಂಬ್ ದಾಳಿ ಮಾಡುವ ಕುರಿತು ಬೆದರಿಕೆ ಪತ್ರವೊಂದು ಬಂದಿತ್ತು.
ಇದೀಗ ಈ ಮೂವರು  ಉಗ್ರರ ಬಂಧನದೊಂದಿಗೆ ಈ ಆತಂಕ ಕೊಂಚ ಕಡಿಮೆಯಾಗಿದೆಯಾದರೂ ಮತ್ತಷ್ಟು ಉಗ್ರರು ಅವಿತಿರುವ ಕುರಿತೂ ಶಂಕೆ ವ್ಯಕ್ತವಾಗಿದೆ.

No comments