Breaking News

ಬೀದಿ ನಾಯಿಗಳಿಗೆ ಆಶ್ರಯ ಯೋಜನೆಯ ಮನೆ ನಿರ್ಮಿಸಿದರೆ ?



ಉಡುಪಿ : ಮನೆಯಿಲ್ಲದ ವಲಸೆ ಕಾರ್ಮಿಕರಿಗಾಗಿ ಬೀಡಿನಗುಡ್ಡೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಮನೆ ಇದೀಗ ಬೀದಿನಾಯಿಗಳ ಆವಾಸ ತಾಣವಾಗಿ ಬದಲಾಗಿದೆ. ಈ ಮನೆಯನ್ನು ಜೂನ್ ತಿಂಗಳಲ್ಲಿ ಉದ್ಘಾಟಿಸಲಾಗಿದೆ.

ನಗರಸಭೆ ಅಧಿಕಾರಿಗಳು ಕಳೆದ ವರ್ಷ ರಾಜ್ಯ ಸರ್ಕಾರ ಮತ್ತು ಬೆಂಗಳೂರು ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸಿದ ಪ್ರಸ್ತಾವನೆಯನ್ವಯ ಬಳಿಕ ಉಡುಪಿ ಸಮುದಾಯ ವ್ಯವಹಾರಗಳ ಕಚೇರಿಯು ರಾತ್ರಿ ಆಶ್ರಯ ಮನೆ ನಿರ್ಮಾಣಕ್ಕಾಗಿ ರೂ 33 ಲಕ್ಷ ಹಣವನ್ನು ಪಡೆಯಿತು. ಕಟ್ಟಡ ಕಾಮಗಾರಿ ಮತ್ತು ಇತರ ವಲಯಗಳಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರು ಬಸ್ ನಿಲ್ದಾಣಗಳು, ವಾಣಿಜ್ಯ ಕಟ್ಟಡಗಳು ಮತ್ತಿತರ ಸ್ಥಳಗಳನ್ನು ಆಶ್ರಯಕ್ಕಾಗಿ ಬಳಸುತ್ತಿರುವುದು ಕಂಡು ಬಂದುದರಿಂದ ಈ ಮನೆಯನ್ನು ನಿರ್ಮಿಸಲಾಯಿತು.

ಅಧಿಕೃತವಾಗಿ ಉದ್ಘಾಟನೆಗೊಂಡು ಎರಡು ತಿಂಗಳಾದರೂ ಇನ್ನೂ ಕಾರ್ಯಾರಂಭಗೊಂಡಿಲ್ಲ ಇದೀಗ ಮನೆಗಳು ಬೀದಿನಾಯಿಗಳ ಆವಾಸ ತಾಣವಾಗಿ ಬದಲಾಗಿದೆ.


loading...

No comments