ಬಿ ಸಿ ರೋಡು ಸರ್ವಿಸ್ ರಸ್ತೆಯಲ್ಲಿ ಕೃತಕ ಕೆರೆ ನಿರ್ಮಾಣವಾಯಿತೇ
ಬಂಟ್ವಾಳ : ಬಿ ಸಿ ರೋಡು ಸರ್ವಿಸ್ ರಸ್ತೆ ಸಮಸ್ಯೆ ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಂಡು ಬರುತ್ತಿಲ್ಲ. ಇಲ್ಲಿನ ಸರ್ವಿಸ್ ರಸ್ತೆಯ ಅವ್ಯವಸ್ಥೆಯ ಫಲ ಇಲ್ಲಿನ ಸಾರ್ವಜನಿಕರು ಕಳೆದ ಹಲವು ವರ್ಷಗಳಿಂದ ಅನುಭವಿಸುತ್ತಲೇ ಬರುತ್ತಿದ್ದಾರೆ. ಈಗಲೂ ಇದು ನಿರ್ಣಾಯಕ ಹಂತಕ್ಕೆ ಬರುವ ಯಾವ ಪ್ರಯತ್ನಗಳೂ ಜನಪ್ರತಿನಿಧಿಗಳಿಂದಾಗಲೀ, ಇಲಾಖಾಧಿಕಾರಿಗಳಿಂದಗಾಲೀ ನಡೆಯುತ್ತಿಲ್ಲ ಎಂಬುದೇ ಇಲ್ಲಿನ ನಾಗರಿಕ ದೌರ್ಭಾಗ್ಯ.
ಇಲ್ಲಿನ ರಸ್ತೆಯಲ್ಲಿ ಇತ್ತೀಚೆಗೆ ನಿರ್ಮಿಸಲಾಗಿರುವ ಚರಂಡಿಯೂ ಅವೈಜ್ಞಾನಿಕ ಹಾಗೂ ಅಸಮರ್ಪಕ ಕಾಮಗಾರಿಯಿಂದ ಕೂಡಿದ್ದು, ಮಳೆ ಇಲ್ಲದಿದ್ದರೂ ಮಳೆ ನೀರು ಸರ್ವಿಸ್ ರಸ್ತೆಯಿಡೀ ಆವರಿಸಿ ನದಿಯಂತಾಗಿ ಹರಿಯುವುದು ಇಲ್ಲಿ ಮಾಮೂಲು ಆಗಿ ಬಿಟ್ಟಿದೆ
loading...
No comments