Breaking News

ಡಿಕೆಶಿ ಪರ ಜೈಕಾರ ಮೊಳಗಿಸಿದ ಗುಜರಾತ್ ಶಾಸಕರು


ಬೆಂಗಳೂರು :  ಕಳೆದ 3 ದಿನಗಳಿಂದ ಆದಾಯ ದಾಳಿಗೆ ಒಳಗಾಗಿ ಅಕ್ಷರಶಃ ಗೃಹ ಬಂಧನದಲ್ಲಿದ್ದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ರಾಜಭವನಕ್ಕೆ ಆಗಮಿಸುತ್ತಿದ್ದಂತೆ ಅಲ್ಲಿಯೇ ಇದ್ದ ಗುಜರಾತ್‌ನ ಎಲ್ಲಾ ಕಾಂಗ್ರೆಸ್ ಶಾಸಕರು ಹರ್ಷೋದ್ಗಾರ, ಜೈಕಾರ ಹಾಕಿದರು.

ಶಾಸಕರ ಜತೆ ಡಿಕೆಶಿ
ರಾಜಭವನದ ಭೇಟಿಯ ಬಳಿಕ ವಿಧಾನಸೌಧಕ್ಕೆ ಎಲ್ಲ ಶಾಸಕರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋದ ಡಿಕೆಶಿ, ಎಲ್ಲವನ್ನೂ ಶಾಸಕರುಗಳಿಗೆ ಪರಿಚಯ ಮಾಡಿಕೊಟ್ಟರು. ಇದಕ್ಕೂ ಮುನ್ನ ಗಾಂಧಿ ಪ್ರತಿಮೆ ಬಳಿ ಗುಜರಾತ್ ಶಾಸಕರು ಡಿ.ಕೆ. ಶಿವಕುಮಾರ್ ಜತೆ ಹರ್ಷ ವ್ಯಕ್ತಪಡಿಸಿದರು.

ಶಾಸಕರು, ಸಚಿವ ಶಿವಕುಮಾರ್‌ ಅವರಿಗೆ ಜೈಕಾರ ಹಾಕುವ ಮೂಲಕ ತಮ್ಮ ಕೃತಜ್ಞತೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು. ಈ ವೇಳೆಕಳೆದ 3-4 ದಿನಗಳಿಂದ ಕುಂದಿದ ಕಳೆ ಈ ಎಲ್ಲಾ ಶಾಸಕರ ಮುಖದಲ್ಲಿ ಮರಳಿ ಬಂದಂತಿತ್ತು.

ಗುಜರಾತ್‌ನವರೇ ಆಗಿರುವ ರಾಜ್ಯಪಾಲ ವಜುಬಾಯಿ ವಾಲಾ ಅವರನ್ನು ಗುಜರಾತ್‌ನ ಶಾಸಕರು ಭೇಟಿ ಮಾಡಿ ರಾಜಭವನದ ಹೊರಗಡೆ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಸಚಿವ ಶಿವಕುಮಾರ್ ರಾಜಭವನದ ಆವರಣ ಪ್ರವೇಶಿಸುತ್ತಿದ್ದಂತೆ ಶಾಸಕರ ಮುಖದಲ್ಲಿ ಎಲ್ಲಿಲ್ಲದ ನವೋತ್ಸಾಹ ತುಂಬಿ ತುಳುಕುತ್ತಿತ್ತು.


loading...

No comments