Breaking News

ನೋಟು ನಿಷೇಧದ ಬಳಿಕ ಕಲ್ಲು ತೂರಾಟಗಾರ ಮತ್ತು ನಕ್ಸಲರ ಕಿಸೆ ಖಾಲಿ ಆಗಿ ಬಿಟ್ಟಿದೆ : ಅರುಣ್‌ ಜೇಟ್ಲಿ


ನವದೆಹಲಿ : ಕಳೆದ ವರ್ಷ ನೋಟು ಅಮಾನ್ಯದಿಂದ ಜಮ್ಮು- ಕಾಶ್ಮೀರ ಪ್ರತ್ಯೇಕವಾದಿಗಳು ಹಾಗೂ ಮಾವೋವಾದಿಗಳಿಗೆ ನೀಡುತ್ತಿದ್ದ ನಿಧಿ ಸರಬರಾಜಿಗೆ ಬ್ರೇಕ್‌ ಬಿದ್ದಿದೆ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಮುಂಬಯಿ ಬಿಜೆಪಿ ಅಧ್ಯಕ್ಷ ಆಶಿಶ್‌ ಶೆಲರ್‌ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬಂದಿದ್ದ ಜೇಟ್ಲಿ, ನೋಟು ಅಮಾನ್ಯೀಕರಣದ ಬಳಿಕ ಜಮ್ಮು-ಕಾಶ್ಮೀರದ ಪ್ರತ್ಯೇಕವಾದಿಗಳು ಹಾಗೂ ನಕ್ಸಲ್‌ ಪೀಡಿತ ರಾಜ್ಯಗಳಲ್ಲಿ ನಡೆಯುತ್ತಿದ್ದ ವಿದ್ವಂಸಕ ಕೃತ್ಯಗಳು ಕಡಿಮೆಯಾಗಿದೆ ಎಂದಿದ್ದಾರೆ.


ಕಣಿವೆ ರಾಜ್ಯದಲ್ಲಿ ಪ್ರತಿನಿತ್ಯ ಕಾಣುತ್ತಿದ್ದ ಪ್ರತಿಭಟನೆ, ಕಲ್ಲು ತೂರಾಟ ಗಣನೀಯವಾಗಿ ಕ್ಷೀಣಿಸಿದೆ, ನೋಟು ಅಮಾನ್ಯದ ಮೊದಲು ಬೃಹತ್‌ ಸಂಖ್ಯೆಯಲ್ಲಿ ಕಲ್ಲು ತೂರಾಟಗಾರರ ಗುಂಪು ಕಾಣಿಸಿಕೊಳ್ಳುತ್ತಿತ್ತು. ಆದರೆ ಇದೀಗ ಈ ಸಂಖ್ಯೆ ಕಡಿಮೆಯಾಗಿದೆ, ಹೆಚ್ಚೆಂದರೆ 25 ಮಂದಿಸೇರಿಕೊಂಡು ಕಲ್ಲುತೂರಾಟ ನಡೆಸುತ್ತಿದ್ದಾರೆ' ಎಂದು ಜೇಟ್ಲಿ ಹೇಳಿದ್ದಾರೆ.




loading...

No comments