Breaking News

ಟ್ವೀಟಿಗರ ಕೆಂಗಣ್ಣಿಗೆ ಗುರಿಯಾದ ಪ್ರತಾಪ್ ಸಿಂಹ


ಬೆಂಗಳೂರು : ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಇಂದಿರಾ ಕ್ಯಾಂಟೀನ್ ಕುರಿತು ಮಾಡಿದ ಟ್ವೀಟ್‍ಗೆ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು ವಾಟ್ಸಪ್ ನಲ್ಲಿ ಬಂದ ಸಂದೇಶ ಎಂದು ಉಲ್ಲೇಖಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

‘ಚಹಾ ಮಾರುತ್ತಿದ್ದ ಮೋದಿ ಅವರು ಪ್ರಧಾನಿಯಾದರು.. ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಕ್ಯಾಂಟೀನ್ ಶುರು ಮಾಡಿದ್ರು..!!’ ಎಂದು ಆ ಸಂದೇಶದಲ್ಲಿ ಬರೆಯಲಾಗಿತ್ತು. ಆದ್ರೆ ಟ್ವೀಟಿಗರು ಮಾತ್ರ ಪ್ರತಾಪ್ ಸಿಂಹ ಅವಮಾನಿಸುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಸಂಸದರ ಈ ಟ್ವೀಟ್ ಗೆ ನೂರಾರು ಜನರು ಟ್ವಿಟ್ಟರ್ ನಲ್ಲೇ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.








loading...

No comments