Breaking News

ಸ್ವಯಂ ಘೋಷಿತ ದೇವಮಾನವ ರಾಮ್ ರಹಿಮ್ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣ ನಾಳೆ ತೀರ್ಪು



ಚಂಡಿಗಢ : ಸ್ವಯಂ ಘೋಷಿತ ದೇವಮಾನವ ಬಾಬಾರಾಮ್ ರಹಿಮ್ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣದ
ತೀರ್ಪನ್ನು ಪಂಚ ಕುಲದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ನಾಳೆ ನೀಡಲಿದೆ.
ನ್ಯಾಯಾಲಯದ ಈ ತೀರ್ಪು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಸರ್ಕಾರಗಳ ನಿದ್ದೆ ಕೆಡಿಸಿದೆ. ತೀರ್ಪಿನ ಸಂದರ್ಭದಲ್ಲಿ ಎದುರಾಗುವ ಶಾಂತಿ ಸುವ್ಯವಸ್ಥೆ ಸವಾಲನ್ನು ಎದುರಿಸಲು ಎರಡೂ ರಾಜ್ಯಗಳು ಕರ್ಪ್ಯೂ ವಿಧಿಸಿ ಅಗತ್ಯ ಕಾನೂನುಕ್ರಮ ಕೈಗೊಳ್ಳಲಾಗಿದೆ.
ಪಂಜಾಬ್, ಹರಿಯಾಣ ಮತ್ತು ಚಂಡಿಗಢಗಳಲ್ಲಿ ಸಾಮಾಜಿಕ ಜಾಲ ತಾಣಗಳನ್ನು ನಿಷೇಧಿಸುವುದು ಸೇರಿದಂತೆ ಮೊಬೈಲ್ ಇಂಟರ್ ಸೇವೆಯ ಸ್ಥಗಿತಕ್ಕೆ ಸರ್ಕಾರಗಳು ಮುಂದಾಗಿವೆ.
ಡೇರಾ ಸಚ್ಛಾ ಸೌಧಾ ಸಂಪ್ರದಾಯದ ಧಾರ್ಮಿಕ ಮುಖಂಡ ಹಾಗೂ ತನ್ನನ್ನು ದೇವಮಾನವ ಎಂದು ಘೋಷಿಸಿ ಕೊಂಡಿರುವ ಬಾಬಾ ರಾಮ್ ರಹೀಂ ಸಿಂಗ್‌ರ ಲಕ್ಷಾಂತರ ಭಕ್ತರು. ಹೀಗಾಗಲೇ ಹರಿಯಾಣದ ಪಂಚ ಕುಲ ಸೇರಿದಂತೆ ಸುತ್ತಮುತ್ತಲು ಬೀಡುಬಿಟ್ಟಿದ್ದಾರೆ. ಇವರಿಗೆ ಪಂಜಾಬ್, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಪಾರ ಪ್ರಮಾಣ ಭಕ್ತ ಸಮೂಹ ಇದ್ದು, ತಮ್ಮ ಗುರುವಿನ ವಿರುದ್ಧದ ತೀರ್ಪು ಏನಾಗುವುದೋ ಎಂಬ ಕಾತುರ ಭಕ್ತ ಸಮೂಹವನ್ನು ಕಾಡುತ್ತಿದೆ.
ಒಂದು ವೇಳೆ ಗುರುಗಳ ವಿರುದ್ಧ ತೀರ್ಪು ಬಂದರೆ ಆಗ ಭಕ್ತ ಸಮೂಹ ದಾಂಧಲೇ ಹಿಂಸಾಚಾರದಲ್ಲಿ ತೊಡಗಬಹುದು ಎಂದು ನಿರೀಕ್ಷಿಸಿರುವ ಸರ್ಕಾರ ಎಲ್ಲ ಸುರಕ್ಷತಾ ಕಾರ್ಯಗಳನ್ನು ಕೈಗೊಂಡಿದೆ.
ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಕೇಂದ್ರ ಮೀಸಲು ಪಡೆ, ಅರೆಸೇನಾ ಪಡೆಗಳನ್ನು ನಿಯೋಜಿಸಿದೆ. ಪರಿಸ್ಥಿತಿ ಕೈ ಮೀರಿದರೆ ಸೇನೆಯನ್ನು ಕರೆಸುವ ಕುರಿತು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಪಂಜಾಬ್ ಮುಖ್ಯಮಂತ್ರಿ ಅಮೀಂದರ್ ಸಿಂಗ್ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

No comments