Breaking News

Rss ಕಾರ್ಯಕರ್ತ ಶರತ್ ಮಡಿವಾಳ ಕೊಲೆಗಡುಕರ ಎಕ್ಸಕ್ಲೂಸಿವ್ ಮಾಹಿತಿ ಬಹಿರಂಗ
‌ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಿ.ಸಿ. ರೋಡ್ನಲ್ಲಿ ಜುಲೈ ಮೊದಲ ವಾರದಲ್ಲಿ ನಡೆದಿದ್ದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳರ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (‍ಪಿಎಫ್ಐ) ಸಂಘಟನೆಯ ಇಬ್ಬರು ಕಾರ್ಯಕರ್ತರನ್ನು ಪಶ್ಚಿಮ ವಲಯ ಐಜಿಪಿ ಪಿ.ಹರಿಶೇಖರನ್ ನೇತೃತ್ವದ ವಿಶೇಷ ತನಿಖಾ ತಂಡ  ಮಂಗಳವಾರ ಬಂಧಿಸಿದೆ.‌ಶರತ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಬಂಟ್ವಾಳ ತಾಲ್ಲೂಕು ಸಜಿಪ ಗ್ರಾಮದ ಹಾಲಾಡಿಯ ಇಂದಿರಾನಗರ ನಿವಾಸಿ ಅಬ್ದುಲ್ ಶಾಫಿ ಅಲಿಯಾಸ್ ಶಾಫಿ (36) ಮತ್ತು ಪಿಎಫ್ಐ ಸಂಘಟನೆಯ ಚಾಮರಾಜನಗರ ಜಿಲ್ಲಾ ಘಟಕದ ಅಧ್ಯಕ್ಷನಾಗಿರುವ ಅಲ್ಲಿನ ಗಾಳಿಪುರ ಗ್ರಾಮದ ಖಲೀಲ್ವುಲ್ಲಾ (30) ಎಂಬುವವರನ್ನು ಬಂಧಿಸಿದ್ದಾರೆ.

ಖಲೀಲ್‌ವುಲ್ಲಾ ಪಿಎಫ್‌ಐ ಸಂಘಟನೆಯಲ್ಲಿ ಸಕ್ರಿಯನಾಗಿದ್ದು, ಚಾಮರಾಜನಗರ ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದು ಕೋಮು ಗಲಭೆ, ಕೊಲೆ ಯತ್ನ ಪ್ರಕರಣ ಕೂಡ ಬಾಗಿಯಾದ ಪ್ರಕರಣಗಳು  ಇವನ ದಾಖಲು ಆಗಿರುತ್ತದೆ. ಅದಲ್ಲದೇ ಬೆಳ್ಳಾರೆಯ pfi ಮುಖಂಡನ ಜೊತೆ ಖಲೀಲ್ ನಿರಂತರ ಸಂಪರ್ಕ ಹೊಂದಿದ್ದ ಎಂದು ತಿಳಿದು ಬಂದಿದೆ. ಅಬ್ದುಲ್‌ ಶಾಫಿ ಕೂಡ ಪಿಎಫ್‌ಐ ಸಂಘಟನೆಯ ಕಾರ್ಯಕರ್ತ ಎಂಬ ಮಾಹಿತಿ ಲಭ್ಯವಾಗಿದೆ.  ಇಬ್ಬರೂ ಆರೋಪಿಗಳ ತೀವ್ರ ವಿಚಾರಣೆ ನಡೆಯುತ್ತಿದ್ದು. ಈ ಪ್ರಕರಣದಲ್ಲಿ ಇನ್ನೂ ನಾಲ್ಕೈದು ಮಂದಿ ಆರೋಪಿಗಳ ಬಂಧನ ಬಾಕಿ ಇದೆ. ಎಲ್ಲ ಆರೋಪಿಗಳ ವಿವರಗಳನ್ನು ತನಿಖಾ ತಂಡ ಈಗಾಗಲೇ ಕಲೆಹಾಕಿದ್ದು . ಒಂದೆರಡು ದಿನಗಳೊಳಗೆ ಎಲ್ಲರನ್ನೂ ಬಂಧಿಸಲಾಗುವುದು ಸಾಧ್ಯತೆ ಇದೆ ಎಂದು ಹೇಳಲಾಗಿದೆ ಈಗ ಬಂಧಿತರಾಗಿರುವವರು ಕೊಲೆಗೆ ಸಂಚು, ಅದನ್ನು ಕಾರ್ಯಗತಗೊಳಿಸುವುದು, ಆರೋಪಿಗಳು ತಲೆಮರೆಸಿಕೊಳ್ಳಲು ನೆರವು ನೀಡಿರುವುದು, ಸಾಕ್ಷ್ಯನಾಶಕ್ಕೆ ಯತ್ನಿಸಿರುವುದು ತನಿಖೆ ವೇಳೆ ತಿಳಿದು ಬಂದಿದೆ.
No comments