Breaking News

ಮೋಸ್ಟ್​​ ವಾಂಟೆಡ್​ ಲಷ್ಕರ್​​​ ಉಗ್ರನನ್ನು ಗುಂಡಿಕ್ಕಿ ಫಿನಿಷ್ ಮಾಡಿದ ಸೇನೆ



ನವದೆಹಲಿ : ಭಯೋತ್ಪಾದನೆಯ ವಿರುದ್ಧದ ಸಮರದಲ್ಲಿ ಭಾರತೀಯ ಸೇನೆ ಮಗದೊಂದು ಗೆಲುವನ್ನು ದಾಖಲಿಸಿದೆ. ಜಮ್ಮು ಮತ್ತು ಕಾಶ್ಮೀರ ಪುಲ್ವಾಮಾದ ಬಂಡೇರ್‌ಪುರಾ ಗ್ರಾಮದಲ್ಲಿ ಮೋಸ್ಟ್ ವಾಂಟೆಡ್ ಉಗ್ರಗಾಮಿಯೋರ್ವನನ್ನು ಭಾರತೀಯ ಸೇನೆ ಗುಂಡಿಕ್ಕಿ ಫಿನಿಷ್ ಮಾಡಿದೆ .ಘಟನೆಯಲ್ಲಿ ಓರ್ವ ಯೋಧ ಗಾಯಗೊಂಡಿದ್ದಾರೆ.

ಉಗ್ರ ಆಯೂಬ್​ ಲೆಲ್ಹರಿ ಮೋಸ್ಟ್​​ ವಾಂಟೆಡ್​​ ಉಗ್ರನಾಗಿದ್ದ. ಪಾಕಿಸ್ತಾನದಿಂದ ಹಲವು ಉಗ್ರರೊಂದಿಗೆ ಭಾರತಕ್ಕೆ ನುಸುಳಿದ್ದ ಉಗ್ರ ಆಯೂಬ್​​ ಕಳೆದ ತಿಂಗಳು ನಡೆದ ಎನ್​​ಕೌಂಟರ್​ ವೇಳೆ ತಪ್ಪಿಸಿಕೊಂಡಿದ್ದ ಎಂದು ಜಮ್ಮು-ಕಾಶ್ಮೀರದ ಡಿಜಿಪಿ ಶೇಷ ಪಾಲ್​ ವೈದ್​ ಮಾಹಿತಿ ನೀಡಿದ್ದಾರೆ. 

No comments