Breaking News

ಕೇರಳ `love jihad` ಎನ್ಐಎ ತನಿಖೆಗೆ ಸುಪ್ರೀಂ ಆದೇಶ



ನವದೆಹಲಿ : ಕೇರಳದ ಹಿಂದೂ ಮಹಿಳೆ ಮತ್ತು ಮುಸ್ಲಿಂ ವ್ಯಕ್ತಿಯ ನಡುವಿನಅಕ್ರಮ  ವಿವಾಹವನ್ನು ತನಿಖೆ ಮಾಡುವಂತೆ ಸುಪ್ರೀಂಕೋರ್ಟ್ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ)ಗೆ ಸೂಚಿಸಿದೆ. ಆ ಹಿಂದೂ ಮಹಿಳೆಯನ್ನು ಇಸ್ಲಾಂಗೆ ಮತಾಂತರಿಸಿ ನಂತರ ಆತ ಮದುವೆ ಮಾಡಿಕೊಂಡಿದ್ದಾನೆಂದೂ ಹೇಳಲಾಗಿದೆ.

ಇದು ಲವ್ ಜಿಹಾದ್ ಆಗಿದ್ದು ಅಕ್ರಮವಾಗಿರುವುದರಿಂದ  ಅದನ್ನು ರದ್ದುಪಡಿಸಲಾಗಿದೆ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು. ಈ ಎನ್‌ಐಎ ತನಿಖೆಯನ್ನು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಆರ್.ವಿ. ರವೀಂದ್ರನ್ ಮೇಲ್ವಿಚಾರಣೆಯಲ್ಲಿ ಕೈಗೊಳ್ಳಬೇಕೆಂದೂ ಕೋರ್ಟ್ ಆದೇಶಿಸಿದೆ.

ಹಿಂದೂ ಬಾಲಕಿಯರನ್ನು ಮತಾಂತರಿಸಿ ನಂತರ ಅವರನ್ನು ಮುಸ್ಲಿಂ ವ್ಯಕ್ತಿಗಳಿಗೆ ವಿವಾಹ ಮಾಡುವುದು ಒಂದು ರೀತಿಯ ಲವ್ ಜಿಹಾದ್‌ನಂತೆ ನಡೆಯುತ್ತಿದೆ ಎಂದು ಎನ್‌ಐಎ ಸುಪ್ರೀಂಕೋರ್ಟಿಗೆ ತಿಳಿಸಿದೆ. ಇದರಲ್ಲಿ ಭಯೋತ್ಪಾದಕರ ಕೈವಾಡವೂ ಇರಬಹುದೆಂಬ ಶಂಕೆಯಿದೆ.

ಈ ಪ್ರಕರಣದ ಎಲ್ಲ ಕಾಗದ ಪತ್ರಗಳು ಮತ್ತು ದಾಖಲೆಗಳನ್ನು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಜೂನ್ 10 ರಂದು ಎನ್‌ಐಎಗೆ ಆದೇಶಿಸಿತ್ತು.
ಈ ಸಂಬಂಧದ ಎಲ್ಲಾ ದಾಖಲೆಗಳನ್ನು ತನಿಖೆಗಾಗಿ ಎನ್‌ಐಎಗೆ ಒದಗಿಸಬೇಕೆಂದು ಸುಪ್ರೀಂಕೋರ್ಟ್ ಕೇರಳ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿತ್ತು.

ತನಿಖೆ ಮಾಡುವಾಗ ಯಾವುದೇ ತಾರತಮ್ಯಕ್ಕೆ ಅವಕಾಶವಿಲ್ಲದಂತೆ ನ್ಯೂಟ್ರಲ್ ಆಗಿರಬೇಕೆಂದೂ ಎನ್ಐಎಗೆ ಕೋರ್ಟ್ ಆದೇಶ ನೀಡಿದೆ. ಎನ್‌ಐಎ ತನಿಖೆ ಮಾಡುವ ಮೊದಲು ಕೇರಳ ಪೊಲೀಸರು ಮಾಡಿದ ತನಿಖಾ ವರದಿಯನ್ನು ಪರಿಶೀಲಿಸಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ.

ಇದು ಕೇರಳಕ್ಕೆ ಸೀಮಿತವಾದ ಒಂದೇ ಒಂದು ಪ್ರಕರಣವೋ ಅಥವಾ ಇದರ ಹಿಂದೆ ವ್ಯಾಪಕವಾದ ಜಾಲ ಇದೆಯೋ ಎಂಬುದನ್ನು ಪತ್ತೆಹಚ್ಚಬೇಕೆಂದೂ ಸೂಚಿಸಲಾಗಿದೆ. ಇದನ್ನು ಗೊತ್ತುಪಡಿಸಲು ಕೇರಳ ಪೊಲೀಸರ, ಎನ್‌ಐಎ ಸಹಕಾರ ಅಗತ್ಯವೆಂದು ಅದು ಹೇಳಿದೆ.




loading...

No comments