ಇನ್ಮುಂದೆ ಎಲೆಕ್ಟ್ರಿಕ್ ಕಾರು ಮೂಲಕ ಕೇಂದ್ರ ಸಚಿವರು, ಅಧಿಕಾರಿಗಳು ಸಂಚರಿಸಲಿದ್ದಾರೆ
ನವದೆಹಲಿ : ರಾಜಧಾನಿ ಹೊಸದಿಲ್ಲಿಯಲ್ಲಿ ಇನ್ಮುಂದೆ ಕೇಂದ್ರ ಸಚಿವರು, ಅಧಿಕಾರಿಗಳು ಇನ್ಮುಂದೆ ಎಲೆಕ್ಟ್ರಿಕ್ ಕಾರುಗಳಲ್ಲಿ ಪ್ರಯಾಣ ಮಾಡಲಿದ್ದಾರೆ.
ಮುಂದಿನ ನವೆಂಬರ್ ತಿಂಗಳಿನಲ್ಲಿ ಪ್ರಾಯೋಗಿಕವಾಗಿ ಎಲೆಕ್ಟ್ರಿಕ್ ಕಾರುಗಳನ್ನು ಬಳಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆಗಳು ಆರಂಭವಾಗಲಿವೆ . ಎಂದು ಕೇಂದ್ರ ಇಂಧನ ಸಚಿವ, ನವೀಕೃತ ಇಂಧನ ಸಚಿವ ಪಿಯೂಷ್ ಗೋಯಲ್ ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿದ್ದಾರೆ.
ಮಾಲಿನ್ಯ ನಿಯಂತ್ರಣ ಮಾಡಲು ಹಾಗೂ ತೈಲ ಬಳಕೆ ಕಡಿಮೆ ಮಾಡಲು ಮುಂದಿನ ನವೆಂಬರ್ ತಿಂಗಳಿನಿಂದ ರಾಜಧಾನಿ ಹೊಸದಿಲ್ಲಿಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನ ಬಳಸಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದಕ್ಕಾಗಿ ಎನರ್ಜಿ ಎಫಿಷಿಯನ್ಸಿ ಸರ್ವೀಸಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಮೊದಲಿಗೆ ಸರಕಾರಿ ಇಲಾಖೆಗಳಿಂದಲೇ ಇದನ್ನು ಪ್ರಯೋಗ ಮಾಡಲಾಗುವುದು. ಕೆಲವು ಸಚಿವರು, ಅಧಿಕಾರಿಗಳಿಗೆ ಈ ಕಾರುಗಳನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ಎಸ್‌ಯುವಿ ಮಾದರಿಯ ವಾಹನವನ್ನು ನೀಡಲಾಗುವುದು. ಇದನ್ನು ಒಮ್ಮೆ ಚಾಜ್ ಮಾಡಿದರೆ 120 ರಿಂದ 150 ಕಿಲೋ ಮೀಟರ್‌ವರೆಗೆ ಸಂಚರಿಸಬಹುದು ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ.
No comments