Breaking News

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಳಿಕ ರಕ್ಷಣೆ ಖಾತೆ ವಹಿಸಿಕೊಂಡ 2ನೇ ಮಹಿಳೆ ನಿರ್ಮಲಾ ಸೀತಾರಾಮನ್ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟವನ್ನು ಪುನರ್ ರಚಿಸಿದ್ದು, ರಾಜ್ಯದ ಅನಂತಕುಮಾರ್ ಹೆಗೆ‌ಡೆ ಸೇರಿದಂತೆ 9 ಮಂದಿ ನೂತನ ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡ ಬೆನ್ನೇಲ್ಲೆ ಹಲವು ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ.

ಇದುವರೆಗೂ ವಾಣಿಜ್ಯ ಖಾತೆ ರಾಜ್ಯ ಸಚಿವರಾಗಿದ್ದ ನಿರ್ಮಲಾ ಸೀತಾರಾಮ್ ಅವರಿಗೆ ಬಡ್ತಿ ನೀಡಿ ಮಹತ್ವದ ರಕ್ಷಣೆ ಇಲಾಖೆ ಜವಾಬ್ದಾರಿ ವಹಿಸಲಾಗಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಳಿಕ ರಕ್ಷಣೆ ಖಾತೆ ವಹಿಸಿಕೊಂಡ 2ನೇ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಂಪುಟ ದರ್ಜೆ ಸಚಿವರಾಗಿ ಬಡ್ತಿ ಪಡೆದ ಪಿಯೂಷ್ ಗೋಯಲ್‌ಗೆ ರೈಲ್ವೆ, ಧರ್ಮೇಂದ್ರ ಪ್ರಧಾನಿ ಅವರಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಪೆಟ್ರೋಲಿಯಂ ಹಾಗೂ ಮುಕ್ತಾರ್ ಅಬ್ಬಾಸ್ ನಕ್ವಿ ಅವರನ್ನು ಅಲ್ಪಸಂಖ್ಯಾತರ ಖಾತೆಯಲ್ಲಿ ಮುಂದುವರಿಸಲಾಗಿದೆ.

ರಾಜ್ಯದಿಂದ ಸಚಿವರಾದ ಅನಂತ್ ಕುಮಾರ್ ಹೆಗಡೆಗೆ ಕೌಶಲ್ಯ ಅಭಿವೃದ್ಧಿ ಖಾತೆ ನೀಡಲಾಗಿದೆ. ಉಳಿದಂತೆ, ಅನಂತ್ ಕುಮಾರ್, ಸದಾನಂದ ಗೌಡ ಹಾಗೂ ರಮೇಶ್ ಜಿಗಜಿಣಗಿ ಅವರ ಖಾತೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ನೂತನ ಸಚಿವರಾದ ಸತ್ಯಪಾಲ್ ಸಿಂಗ್ ಅವರಿಗೆ ಮಾನವ ಅಭಿವೃದ್ಧಿ, ಜಲಸಂಪನ್ಮೂಲ ಹಾಗೂ ಗಂಗಾ ಪುನರುಜ್ಜೀವನ, ಆಲ್ಫೋನ್ ಕೆ. ಅವರಿಗೆ ಪ್ರವಾಸೋದ್ಯಮ, ಆರ್.ಕೆ. ಸಿಂಗ್‌ಗೆ ನವೀಕರಿಸಬಹುದಾದ ಇಂಧನ, ಹರ್ದೀಪ್ ಸಿಂಗ್ ಪುರಿಗೆ ವಸತಿ, ನಗರಾಭಿವೃದ್ಧಿ

*********

ಉಳಿದಂತೆ ನಿತಿನ್ ಗಡ್ಕರಿ ಅವರಿಗೆ ಹೆದ್ದಾರಿ ಮತ್ತು ಭೂಸಾರಿಗೆ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ಜಲ ಸಂಪನ್ಮೂಲ ಹಾಗೂ ಗಂಗಾ ಪುನರ್ ಜೀವನ ಖಾತೆ, ರೈಲ್ವೆ ಖಾತೆ ಕಳೆದು ಕೊಂಡ ಸುರೇಶ್ ಪ್ರಭು ಅವರಿಗೆ ವಾಣಿಜ್ಯ ಖಾತೆ, ನರೇಂದ್ರ ಸಿಂಗ್ ತೋಮರ್ ಗಣಿ ಮತ್ತು ಗ್ರಾಮೀಣ ಅಭಿವೃದ್ಧಿ, ಸ್ಮೃತಿ ಇರಾನಿಗೆ ಮಾಹಿತಿ ಪ್ರಸಾರ ಖಾತೆ, ಉಮಾ ಭಾರತಿಯರಿಗೆ ಕುಡಿಯುವ ನೀರು ನೈರ್ಮಲ್ಯ ಖಾತೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ ಮೇನಕಾ ಗಾಂಧಿ ಮುಂದುವರೆದಿದ್ದಾರೆ.

ಅರ್ಜುನ್ ರಾಮ್ ಮೇಘವಾಲ್ ಹಣಕಾಸು ಜೊತೆಗೆ ಸಂಸದೀಯ ವ್ಯವಹಾರಗಳು ಹಾಗೂ ಜಲಸಂಪನ್ಮೂಲ ಉಪೇಂದ್ರ ಖುಷ್ವ, ಮಾನವ ಸಂಪನ್ಮೂಲ ವಿಜಯ್ ಗೋಯಲ್, ಕ್ರೀಡೆ ಮತ್ತು ಸಂಸದೀಯ ವ್ಯವಹಾರ, ಶಿವಪ್ರತಾಪ್ ಶುಕ್ಲ ಹಣಕಾಸು, ರಾಧಾಕೃಷ್ಣ ಪಿ. ಹಣಕಾಸು, ಹಡಗು, ಗಿರಿರಾಜ್ ಸಿಂಗ್ ಸಣ್ಣ ಕೈಗಾರಿಕೆ ಮಹೇಶ್ ಶರ್ಮ ಅವರಿಗೆ ಹಂಚಿಕೆ ಮಾಡಲಾಗಿದೆ.

ಬಾಕ್ಸ್

* ಪ್ರಧಾನಿ ನರೇಂದ್ರ ಮೋದಿ, ಬಾಹ್ಯಾಕಾಶ, ಆಟೋಮಿಕ್ ಎನರ್ಜಿ ಸೇರಿ ಸಚಿವರಿಗೆ ಹಂಚಿಕೆಯಾಗದ ಖಾತೆಗಳು.

ಸಂಪುಟ ದರ್ಜೆ ಸಚಿವರು

* ರಾಜಾನಾಥ್ ಸಿಂಗ್ – ಗೃಹ

* ಅರುಣ್ ಜೇಟ್ಲಿ – ಹಣಕಾಸು, ಕಾರ್ಪೊರೇಟ್ ವ್ಯವಹಾರ.

* ನಿತಿನ್ ಗಡ್ಕರಿ – ಹೆದ್ದಾರಿ, ಭೂ ಸಾರಿಗೆ, ಜಲಸಂಪನ್ಮೂಲ, ಗಂಗಾಪುನರುಜ್ಜೀವನ.

* ಸುರೇಶ್ ಪ್ರಭು – ವಾಣಿಜ್ಯ ಮತ್ತು ಕೈಗಾರಿಕೆ.

‌* ಡಿ.ವಿ. ಸದಾನಂದ ಗೌಡ – ಅಂಕಿಅಂಶ ಕಾರ್ಯಕ್ರಮ ಜಾರಿ.

* ಉಮಾಭಾರತಿ – ಕುಡಿಯುವ ನೀರು, ಒಳಚರಂಡಿ.

* ರಾಮ್ ವಿಲಾಸ್ ಪಾಸ್ವಾನ್ – ಆಹಾರ ಮತ್ತು ನಾಗರೀಕ ಸರಬರಾಜು.

* ಮೇನಕಾ ಗಾಂಧಿ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ.

* ಅನಂತ್ ಕುಮಾರ್ – ರಾಸಾಯನಿಕ ರಸಗೊಬ್ಬರ, ಸಂಸದೀಯ ವ್ಯವಹಾರ.

* ರವಿಶಂಕರ್ ಪ್ರಸಾದ್ – ಕಾನೂನು, ನ್ಯಾಯ, ಐಟಿ.

* ಜೆ.ಪಿ. ನಡ್ಡ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.

* ಅಶೋಕ್ ಗಜಪತಿ ರಾಜು – ನಾಗರೀಕ ವಿಮಾನ ಯಾನ.

* ಅನಂತ ಗೀತೆ – ಭಾರೀ ಕೈಗಾರಿಕೆ

* ಹರ್‌ಸಿರ್ಮತ್ ಕೌರ್ – ಆಹಾರ ಸಂಸ್ಕರಣೆ.

* ನರೇಂದ್ರ ಸಿಂಗ್ ತೋಮರ್ – ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಗಣಿ.

* ಚೌದರಿ ಧೀರೇಂದ್ರ ಸಿಂಗ್ – ಉಕ್ಕು

* ಜ್ಯುವೆಲ್ ಓರಂ – ಬುಡಕಟ್ಟು ವ್ಯವಹಾರ.

* ರಾಧಾ ಮೋಹನ್ ಸಿಂಗ್ – ಕೃಷಿ, ರೈತ ಕಲ್ಯಾಣ.

*  ತಾವರ್ ಸಿಂಗ್ ಗೆಲ್ಹೋಟ್ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ.

* ಸ್ಮೃ,ತಿ ಇರಾನಿ – ಜವಳಿ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ.

* ‌ಡಾ. ಹರ್ಷವರ್ಧನ್ – ವಿಜ್ಞಾನ ತಂತ್ರಜ್ಞಾನ, ಅರಣ್ಯ ಮತ್ತು ಪರಿಸರ

* ಪ್ರಕಾಶ್ ಜಾವಡೇಕರ್ – ಮಾನವ ಸಂಪನ್ಮೂಲ ಅಭಿವೃದ್ಧಿ

* ಧರ್ಮೇಂದ್ರ ಪ್ರಧಾನ್ – ಪೆಟ್ರೋಲಿಯಂ, ಕೌಶಲ್ಯ ಅಭಿವೃದ್ಧಿ

* ಪಿಯೂಶ್ ಗೋಯಲ್ – ರೈಲ್ವೆ, ಕಲ್ಲಿದ್ದಲು.

* ನಿರ್ಮಲ ಸೀತಾರಾಮನ್ – ರಕ್ಷಣೆ.

* ಮುಕ್ತಾರ್ ಅಬ್ಬಾಸ್ ನಕ್ವಿ – ಅಲ್ಪಸಂಖ್ಯಾತರ ಕಲ್ಯಾಣ.

loading...

No comments