Breaking News

ಎಚ್‍1ಎನ್‌1 ಜ್ವರದ ಬಗ್ಗೆ ನೀವು ತಿಳಿದುಕೊಳ್ಳಬೇಕಿರುವ ಅಂಶಗಳು


ಎಚ್1ಎನ್1 (ಹಂದಿ ಜ್ವರ) ಮನುಷ್ಯರಲ್ಲಿ ಕಾಯಿಲೆ ತರುವ ಒಂದು ವೈರಸ್. ಸಾಮಾನ್ಯ ಜ್ವರದಂತೆಯೇ ಆರಂಭವಾಗುವ ಈ ಕಾಯಿಲೆ ಚಿಕಿತ್ಸೆ ಪಡೆಯದಿದ್ದರೆ ತೀವ್ರವಾಗುತ್ತದೆ. ಜ್ವರದೊಂದಿಗೆ ಹಂದಿ ಎಂದಿದ್ದರೂ ಪ್ರಾಣಿಯಿಂದ ಹರಡೋ ರೋಗವಲ್ಲವಿದು.

ಎಲ್ಲ ಜ್ವರವೂ ಇನ್‌ಫ್ಲೂಯೆಂಜಾ ಎಚ್1ಎನ್1 ಆಗಿರುವುದಿಲ್ಲ. ಈ ಜ್ವರವೂ ಸಾಮಾನ್ಯ ಜ್ವರದಂತೆಯೇ ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದ್ದು, ಜನರು ಎಚ್ಚರಿಕೆಯಿಂದ ಇರಬೇಕು.
ಎಚ್1ಎನ್1 ಲಕ್ಷಣ ಮತ್ತು ಹರಡುವಿಕೆ:

* ಇತರೆ ಇನ್‌ಫ್ಲೂಯೆಂಜಾ ಅಥವಾ ಫ್ಲೂ ಬಂದಾಗ ಇರುವಂತಹ ಶೀತ, ಜ್ವರ, ಕೆಮ್ಮು, ಮೂಗಿನ ಸೋರುವಿಕೆ, ತಲೆನೋವು, ಮೈಕೈ ನೋವು, ಚಳಿ, ಸುಸ್ತು ಮುಂತಾದ ಲಕ್ಷಣಗಳಿರುತ್ತವೆ.

* ಕೆಲವೊಮ್ಮೆ ವಾಂತಿ ಮತ್ತು ಭೇದಿಯೂ ಆಗಬಹುದು ಮತ್ತು ಉಸಿರಾಟದಲ್ಲಿ ತೊಂದರೆ ಕಾಣಿಸಬಹುದು.

* ಸಾಮಾನ್ಯ ಫ್ಲೂ ಹರಡುವ ರೀತಿಯಲ್ಲಿಯೇ ಇನ್‌ಫ್ಲೂಯೆಂಜಾ ಎಚ್1ಎನ್1 ಹರಡುತ್ತದೆ.

*ಸಾಮಾನ್ಯವಾಗಿ ಎಚ್1ಎನ್1 ಸೋಂಕಿತರು ಕೆಮ್ಮಿದಾಗ-ಸೀನಿದಾಗ ಹೊರಬರುವ ತುಂತುರುಗಳಿಂದ(ಡ್ರಾಪಲೆಟ್ಸ್) ಈ ವೈರಸ್‌ಗಳು ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ.

* ವೈಯಕ್ತಿಕ ಸ್ವಚ್ಛತೆ ಇಲ್ಲದೇ ಮೂಗು ಬಾಯಿಯನ್ನು ಹೇಗೆಂದರೆ ಹಾಗೆ ಮುಟ್ಟುವುದರಿಂದಲೂ ಈ ಸೋಂಕು ಹರಡಬಹುದು.

ಏನು ಮಾಡಬಾರದು?

* ಸೋಂಕುಪೀಡಿತರ ಜತೆ ತೀರಾ ಹತ್ತಿರದಿಂದ ಮಾತನಾಡುವುದು.

* ಕೈಕುಲುಕುವುದು ಹಾಗೂ ಸೋಂಕುಪೀಡಿತರು ಮುಟ್ಟಿದ ವಸ್ತುಗಳನ್ನು ಮುಟ್ಟಿ ನಂತರ ಕೈಯನ್ನು ಬಾಯಿ ಅಥವಾ ಮೂಗಿನ ಬಳಿ ಮುಟ್ಟುವುದರಿಂದಲೂ ಈ ಜ್ವರ ಹರಡುತ್ತದೆ.

* ಈ ರೋಗದ ಲಕ್ಷಣಗಳು ಕಂಡು ಬಂದ ಕೂಡಲೇ ಜಾಗ್ರತೆ ವಹಿಸಬೇಕು ಮತ್ತು ಸೂಕ್ತ ಚಿಕಿತ್ಸೆ ಪಡೆಯಬೇಕು.

ಎಚ್1ಎನ್1 ರಕ್ಷಣೆ:

* ಕೆಮ್ಮುವಾಗ ಮತ್ತು ಸೀನುವಾಗ ಮೂಗು ಕರವಸ್ತ್ರ ಅಥವಾ ಟಿಶ್ಯು ಪೇಪರಿನಿಂದ ಮುಚ್ಚಿಕೊಂಡು ನಂತರ ಅದನ್ನು ನಾಶಪಡಿಸಬೇಕು.

* ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆಯುವುದರಿಂದ ಅದರಲ್ಲೂ ವಿಶೇಷವಾಗಿ ಮತ್ತು ಮುಖ್ಯವಾಗಿ ಕೆಮ್ಮಿದಾಗ ಮತ್ತು ಸೀನಿದಾಗ ಕೈ ತೊಳೆಯುವ ಮೂಲಕ ಈ ರೋಗ ತಡೆಗಟ್ಟಬಹುದು.

* ಕಣ್ಣು, ಬಾಯಿ ಮತ್ತು ಮೂಗನ್ನು ಆಗಾಗ ಮುಟ್ಟಬಾರದು. ವೈಯಕ್ತಿಕ ಸ್ವಚ್ಛತೆ ಪಾಲಿಸಿ ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಬೇಕು.

* ಎಚ್1ಎನ್1 ಸೋಂಕು ಇದ್ದಲ್ಲಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯಬೇಕು.

* ಒತ್ತಡ ನಿಭಾಯಿಸಿ ಪೌಷ್ಟಿಕ ಆಹಾರ ಸೇವಿಸಬೇಕು.

* ಉಸಿರಾಟದ ತೊಂದರೆ ಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು.


loading...

No comments